Tuesday, May 30, 2023
spot_imgspot_img
spot_imgspot_img

ಬದಿಯಡ್ಕ: ಯುವ ಸಾಹಿತಿ ವಿಷ ಸೇವಿಸಿ ಆತ್ಮಹತ್ಯೆ

- Advertisement -G L Acharya
- Advertisement -

ಬದಿಯಡ್ಕ: ತುಳು ಕನ್ನಡ ಭಾಷೆಗಳಲ್ಲಿ ಸಕ್ರಿಯಯವಾಗಿ ಬರೆಯುತ್ತಾ ಸಾಹಿತ್ಯ ವಲಯದಲ್ಲಿ ಭರವಸೆ ಮೂಡಿಸಿದ್ದ ಯುವ ಸಾಹಿತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಾಸರಗೋಡು ಜಿಲ್ಲೆಯ ಕುಂಬ್ಡಾಜೆ ಗ್ರಾ.ಪಂ.ನ ಕಜೆ ನಿವಾಸಿ ಶ್ವೇತಾ (23) ಮೃತ ಯುವತಿ. ಮಾರಕ ವಿಷ ಸೇವಿಸಿದ್ದಾಳೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಕಳೆದ ಮೂರು ದಿನಗಳ ಹಿಂದೆ ಮನೆ ಪರಿಸರದಲ್ಲಿ ವಿಷ ಪ್ರಾಶನಗೈದು ಅಸ್ವಸ್ಥ ಸ್ಥಿತಿಯಲ್ಲಿದ್ದ ಇವಳನ್ನು ತಕ್ಷಣ ಮುಳ್ಳೇರಿಯಾ‌ ಆಸ್ಪತ್ರೆಗೂ ಅಲ್ಲಿಂದ ಪೆರಿಯಾರಂ ಮೆಡಿಕಲ್ ಕಾಲೇಜು ಬಳಿಕ ಕೋಝಿಕ್ಕೋಡು ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ನಾರಾಯಣ ಲಲಿತಾ ದಂಪತಿಗಳ ಪುತ್ರಿಯಾದ ಶ್ವೇತಾ ಕಜೆ ಬಡ ಕುಟುಂಬದಲ್ಲಿ ಜನಿಸಿದರೂ ಚಿಕ್ಕಂದಿನಿಂದಲೇ ಸಾಹಿತ್ಯದತ್ತ ಒಲವು ಬೆಳೆಸಿ ಕವನ, ಕಥೆ, ನೀಳ್ಗತೆ, ಕಾದಂಬರಿ, ಗಝಲ್ ಗಳನ್ನು ರಚಿಸಿ ಜನಮೆಚ್ಚುಗೆ ಗಳಿಸಿದ್ದಳು.

ತಾನು ಬರೆದ ಸಾಹಿತ್ಯವನ್ನು ಫೆಸ್ಬುಕ್, ಇನ್ಸ್ಟಾ ಗ್ರಾಂ‌ಮ್, ವಾಟ್ಸಾಪ್, ಪ್ರತಿಲಿಪಿ ಮೊದಲಾದ ಆಧುನಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಿದ್ದು ಇವಳ ಬರಹಗಳು ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಕಳೆದ ಹಲವು ಸಮಯಗಳಿಂದ ಸದಾ ಮೌನಿಯಾಗಿದ್ದ ಈಕೆಯ ಸಾವು ಸಂಶಯಾಸ್ಪದವಾಗಿದ್ದು ತನಿಖೆ ನಡೆಸುವಂತೆ ಒತ್ತಾಯ ಮೂಡಿ ಬಂದಿದೆ.

- Advertisement -

Related news

error: Content is protected !!