

ಮಂಚಿ: ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮದಿನದ ಸೇವೆ ಹಾಗೂ ಸಮರ್ಪಣಾ ಕಾರ್ಯಕ್ರಮದ ಅಂಗವಾಗಿ ಬಿಜೆಪಿ ಮಂಚಿ ಶಕ್ತಿ ಕೇಂದ್ರದ ವತಿಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಜನಸಂಘ, ಬಿಜೆಪಿಯಲ್ಲಿ ಸೇವೆ ಸಲ್ಲಿಸಿದ ಹಿರಿಯ ಕಾರ್ಯಕರ್ತರನ್ನು ಕುಕ್ಕಾಜೆ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಗೌರವಿಸಲಾಯಿತು.

ಹಿರಿಯ ಕಾರ್ಯಕರ್ತ ಉದಯನಾರಾಯಣ ಭಟ್ ಖಂಡಿಗ, ಗಣೇಶ್ ಐತಾಳ್ ಚೌಕದಪಾಲು, ವಿಠ್ಠಲ ಪ್ರಭು ಪತ್ತುಮುಡಿ, ರವೀಂದ್ರ ಶೆಟ್ಟಿ ಕುಕ್ಕಾಜೆ, ಸಂಜೀವ ಆಚಾರ್ಯ ಕುಕ್ಕಾಜೆ, ವೆಂಕಟರಮಣ ಆಚಾರ್ಯ ನೂಜಿಪ್ಪಾಡಿ, ಗೋವಿಂದ ನಾಯಕ್ ನೂಜಿ, ಜಯದೇವ ಭಟ್ ನೂಜಿ, ಉಮೇಶ್ ನಾಯಕ್ ಪುಚ್ಚೆಕೆರೆ, ಕೃಷ್ಣಪ್ಪ ಬೆಳ್ಚಡ ಚೌಕದಪಾಲು, ನಾರಾಯಣ ಖಂಡಿಗ, ಗಣಪತಿ ಭಟ್ ಪುಚ್ಚೆಕೆರೆ ಇವರನ್ನು ಗೌರವಿಸಲಾಯಿತು.

ಬಂಟ್ವಾಳ ಮಂಡಲ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಮಂಡಲದ ಉಪಾಧ್ಯಕ್ಷ ಜಯರಾಮ ನಾಯ್ಕ ಕುಂಟ್ರಕಲ, ಜಿಲ್ಲಾ ಸಮಿತಿ ಆಹ್ವಾನಿತ ಸದಸ್ಯ ಮಾಧವ ಮಾವೆ, ಕೊಳ್ನಾಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕರೋಪಾಡಿ, ಪ್ರಧಾನ ಕಾರ್ಯದರ್ಶಿ ಲೋಹಿತ್ ಅಗರಿ, ಶಕ್ತಿ ಕೇಂದ್ರದ ಪ್ರಭಾರಿಗಳಾದ ನಂದರಾಮ ರೈ, ಅಶ್ವಥ್ ಬಾಳಿಕೆ, ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಎಸ್ ಕಾಮತ್, ಮಂಚಿ ಪಂಚಾಯತ್ ಉಪಾಧ್ಯಕ್ಷ ಮೋಹನ್ ದಾಸ್ ಶೆಟ್ಟಿ, ರೈತ ಮೋರ್ಚಾದ ಪ್ರಶಾಂತ್ ಶೆಟ್ಟಿ ಅಗರಿ ಉಪಸ್ಥಿತರಿದ್ದರು.

ಮಾಜಿ ಗ್ರಾಮ ಪಂಚಾಯತ್ ಸದಸ್ಯ ಕೇಶವರಾವ್ ನೂಜಿಪ್ಪಾಡಿ ಧನ್ಯವಾದವಿತ್ತು, ಶಕ್ತಿ ಕೇಂದ್ರದ ಸಹಪ್ರಮುಖ್ ರಮೇಶ್ ರಾವ್ ಪತ್ತುಮುಡಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಪಂಚಾಯತ್ ಸದಸ್ಯರು, ಬೂತ್ ಅಧ್ಯಕ್ಷರುಗಳು, ಬೂತ್ ಕಾರ್ಯದರ್ಶಿಗಳು, ಬೂತ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಅಶ್ವಥ್ ಬಾಳಿಕೆ ಪ್ರತಿಜ್ಞಾ ವಿಧಿ ಬೋಧಿಸಿದರು.
