Monday, March 20, 2023
spot_imgspot_img
spot_imgspot_img

ಡಿಪೋ ಮ್ಯಾನೇಜರ್ ಕಿರುಕುಳಕ್ಕೆ ಬೇಸತ್ತ ಬಿಎಂಟಿಸಿ ಚಾಲಕ ; ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

- Advertisement -G L Acharya G L Acharya
- Advertisement -

ಬೆಂಗಳೂರು: ಬಿಎಂಟಿಸಿಯಲ್ಲಿ ಡಿಪೋ ಮ್ಯಾನೇಜರ್‌ ಹಾಗೂ ಎಟಿಎಸ್‌ ಕಿರುಕುಳಕ್ಕೆ ಬೇಸತ್ತು ಚಾಲಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೆಂಗೇರಿಯ ಡಿಪೋ 37ರಲ್ಲಿ ನಡೆದಿದೆ. ಡಿಪೋದಲ್ಲಿಯೇ ವಿಷ ಸೇವಿಸಿ ಚಾಲಕ ಶ್ರೀನಾಥ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇತ್ತ ವಿಷ ಸೇವಿಸಿದ ವಿಷಯ ತಿಳಿಯುತ್ತಿದ್ದಂತೆ ಇತರೆ ಚಾಲಕ, ನಿರ್ವಾಹಕರು ಶ್ರೀನಾಥ್‌ ಅವರನ್ನು ಕೊಂಡೊಯ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 15 ವರ್ಷಗಳಿಂದ ಚಾಲಕನಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಡ್ಯೂಟಿ ನೀಡುವ ವಿಚಾರವಾಗಿ ಎಟಿಎಸ್, ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನ್ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.

ಡಿಪೋ ಮ್ಯಾನೇಜರ್ ಮುಂದೆಯೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅಸ್ವಸ್ಥರಾಗಿದ್ದ ಚಾಲಕನನ್ನು ರಾಜರಾಜೇಶ್ವರಿ ಮೆಡಿಕಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಆಸ್ಪತ್ರೆಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!