- Advertisement -
- Advertisement -


ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತರಿಗೆ ಸೇರಿದ ಹತ್ತಾರು ಕಡೆಗಳಲ್ಲಿ ಸೋಮವಾರ ಬೆಳಿಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಾಳಿ ನಡೆಸಿದ್ದು,ಶೋಧ ಕಾರ್ಯ ಪ್ರಗತಿಯಲ್ಲಿದೆ.
ಮುಂಬೈಯ ಹತ್ತಾರು ಪ್ರದೇಶಗಳಲ್ಲಿ ದಾವೂದ್ ಇಬ್ರಾಹಿಂ ಸಹಚರರು ಮತ್ತು ಹವಾಲಾ ದಂಧೆ ನಡೆಸುವವರ ಮೇಲೆ ಎನ್‌ಐಎ ದಾಳಿ ನಡೆಸಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.
ನಾಗಪದ, ಗೋರ್‌ಗಾಂವ್, ಬೊರಿವಲಿ, ಸಂತಾಕ್ರೂಜ್, ಮುಂಬ್ರಾ, ಭಂದಿ ಬಜಾರ್ ಹಾಗೂ ಇತರೆಡೆಗಳಲ್ಲಿ ದಾಳಿ ನಡೆದಿದೆ. ಫೆಬ್ರುವರಿಯಲ್ಲಿ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಈ ದಾಳಿ ನಡೆದಿದೆ.

- Advertisement -