Monday, June 30, 2025
spot_imgspot_img
spot_imgspot_img

ಮಂಗಳೂರಿನ ಮೊದಲ ಝೋಮ್ಯಾಟೋ ಗರ್ಲ್ ಮೇಘನಾ ವಿಧಿವಶ

- Advertisement -
- Advertisement -

ಮಂಗಳೂರು: ಝೋಮ್ಯಾಟೋ ಗರ್ಲ್ ಎಂದೇ ಖ್ಯಾತರಾಗಿದ್ದ ಮಂಗಳೂರಿನ ಮೇಘನಾ ದಾಸ್ ವಿಧಿವಶರಾಗಿದ್ದಾರೆ. ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮೇಘನಾ ದಾಸ್ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಅವರಿಗೆ 36 ವರ್ಷ ವಯಸ್ಸಾಗಿತ್ತು.

ಮಂಗಳೂರಿನ ಉರ್ವ ನಿವಾಸಿಯಾಗಿದ್ದ ಮೇಘನಾ ಕಿಡ್ನಿ ಸಮಸ್ಯೆಯನ್ನು ಎದುರಿಸುತ್ತಿದ್ದರು. ಇದರಿಂದಾಗಿ ಕೆಲಸ ಮಾಡಲಾಗದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು ಎನ್ನಲಾಗಿದೆ. ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಮೇಘನಾ ಅವರಿಗೆ ಸಹಾಯ ಹಸ್ತ ನೀಡಿದ್ದವು. ಆದರೆ ಚಿಕಿತ್ಸೆ ಫಲಿಸದ ಮೇಘನಾ ನಿಧನರಾಗಿದ್ದಾರೆ,

ಬಿಎ ಲಿಟ್ರೇಚರ್ ಪದವಿಧರೆಯಾಗಿದ್ದ ಮೇಘನಾ ಝೋಮ್ಯಾಟೋ ಡೆಲಿವರಿ ಗರ್ಲ್ ಆಗುವ ಮುನ್ನ ಬೆಂಗಳೂರಿನ ಎಂಎನ್ ಸಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಬಳಿಕ ದುಬೈನ ಕಂಪನಿಯೊಂದರಲ್ಲಿಯೂ ಕಾರ್ಯ ನಿರ್ವಹಿಸಿದರು. ಇನ್ನು 2019ರಲ್ಲಿ ಮೇಘನಾ ಮಂಗಳೂರು ಮಹಾನಗರ ಪಾಲಿಕೆಯಿಂದ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದರು. ಮೃತ ಮೇಘನಾ ತಾಯಿ, ಮಗಳು ಹಾಗೂ ಪತಿಯನ್ನು ಅಗಲಿದ್ದಾರೆ.

- Advertisement -

Related news

error: Content is protected !!