- Advertisement -



- Advertisement -
ಮಂಗಳೂರು : ನಗರದ ಬೆಂದೂರು ಬಳಿ ಮೊನ್ನೆ ತಾನೆ ತಾಯಿ-ಮಗು ಪ್ರಯಾಣಿಸುತ್ತಿದ್ದ ಸ್ಕೂಟಿ ಮೇಲೆ ಬಸ್ ಹರಿದು ಮಗು ದಾರುಣವಾಗಿ ಮೃತಪಟ್ಟ ಸ್ಥಳದಲ್ಲೇ ಇಂದು ನಡೆದುಕೊಂಡು ಹೋಗುತ್ತಿದ್ದ ಸುಮಾರು 50 ವರ್ಷ ಪ್ರಾಯದ ಮಹಿಳೆ ಮೇಲೆ ಬಸ್ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ಬಳಿಕ ಬಸ್ ನೊಂದಿಗೆ ಚಾಲಕ ಪರಾರಿಯಾಗಿದ್ದು ಬಸ್ ಪತ್ತೆ ಹಚ್ಚಲು ಪೊಲೀಸರು ಸಿಸಿ ಟಿವಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತಪಟ್ಟ ಮಹಿಳೆ ಗುರುತು ಪತ್ತೆಯಾಗಿಲ್ಲ. ತರಕಾರಿ ತಗೊಂಡು ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬಸ್ ಬಡಿದಿದ್ದು ಮಹಿಳೆ ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದು ಘಟನೆ ಬಳಿಕ ಚಾಲಕ ಬಸ್ಸುನೊಂದಿಗೆ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಸಂಚಾರಿ ಎಸಿಪಿ ಮತ್ತಿತರ ಅಧಿಕಾರಿಗಳು ಭೇಟಿ ನೀಡಿದ್ದು, ಈ ಸಂದರ್ಭ ಸಾರ್ವಜನಿಕರು ಪೊಲೀಸರನ್ನು ತರಾಟೆಗೆ ತಗೊಂಡಿದ್ದಾರೆ.
- Advertisement -