Saturday, July 5, 2025
spot_imgspot_img
spot_imgspot_img

ಮಂಗಳೂರು: ರೈಲು ನಿಲ್ದಾಣದ ಬಳಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ

- Advertisement -
- Advertisement -

ಮಂಗಳೂರು: ಕಂಕನಾಡಿಯ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಬಳಿ 40-50 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಮರವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇನ್ನೂ ಗುರುತು ಪತ್ತೆಯಾಗದ ಈ ವ್ಯಕ್ತಿ 5.5 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ತೆಳ್ಳಗೆ ಮೈಕಟ್ಟು, ಬಿಳಿ /ಕಪ್ಪು ಮಿಶ್ರಿತ ತಿಳಿ ಗಡ್ಡ, ಮೀಸೆ ಹೊಂದಿದ್ದಾರೆ. ಅವರು ನೀಲಿ ಬಣ್ಣದ ಪೂರ್ಣ ತೋಳಿನ ಶರ್ಟ್ ಮತ್ತು ಬೂದು ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದರು. ಮೃತ ವ್ಯಕ್ತಿಯ ಪಾರ್ಥಿವ ಶರೀರವನ್ನು ನಗರದ ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಪೊಲೀಸ್ ಇಲಾಖೆಯ ಪ್ರಕಟಣೆಯ ಪ್ರಕಾರ ವಾರೀಸುದಾರರು ಅಥವಾ ಸಂಬಂಧಿಕರು ಇದ್ದಲ್ಲಿ ಕಂಕನಾಡಿ ಪೊಲೀಸ್ ಠಾಣೆಯನ್ನು 0824-2220529 ಗೆ ಸಂಪರ್ಕಿಸಬಹುದಾಗಿದೆ.

- Advertisement -

Related news

error: Content is protected !!