Tuesday, July 1, 2025
spot_imgspot_img
spot_imgspot_img

ಮಂಗಳೂರು: ಲಕ್ಷಾಂತರ ರೂ. ಸುಲಿಗೆ; ಮಹಿಳೆ ಸೇರಿ ಮೂವರ ಬಂಧನ

- Advertisement -
- Advertisement -

ಮಂಗಳೂರು: 50 ಲಕ್ಷ ರೂ.ವರೆಗೆ ಸುಲಿಗೆ ಮಾಡಿದ ಆರೋಪದ ಮೇಲೆ ಮಹಿಳೆ ಸೇರಿದಂತೆ ಮೂವರನ್ನು ಐಪಿಸಿ ಸೆಕ್ಷನ್‌ಗಳು ಮತ್ತು ಕರ್ನಾಟಕ ಅತಿಯಾದ ಬಡ್ಡಿ ವಸೂಲಿ ನಿಷೇಧ ಕಾಯ್ದೆಯಡಿ ಬಂಧಿಸಲಾಗಿದೆ.

ಬಂಧಿತರನ್ನು ಜೆಪ್ಪಿನಮೊಗರು ನಿವಾಸಿ ಶರ್ಮಿಳಾ (48) ಮತ್ತು ಮೋಹನದಾಸ್ (52) ಮತ್ತು ಬಂಟ್ವಾಳ ತಾಲೂಕಿನ ಸತಿ ಕಿರಣ್ (52) ಎಂದು ಗುರುತಿಸಲಾಗಿದೆ.

vtv vitla
vtv vitla

ಸ್ವರೂಪಾ ಶೆಟ್ಟಿ ಎಂಬವರು ಜೆಪ್ಪುವಿನಲ್ಲಿ ಕಂಪ್ಯೂಟರ್ ತರಬೇತಿ ನೀಡುತ್ತಿದ್ದು, ಆಕೆಯ ವಿದ್ಯಾರ್ಥಿಯ ತಾಯಿಯೊಬ್ಬರು ಸಾಲಕ್ಕಾಗಿ ಸ್ವರೂಪಾ ಅವರನ್ನು ಸಂಪರ್ಕಿಸಿದ್ದಾರೆ. ಆಗ ಸ್ವರೂಪಾ ತನ್ನ ಸ್ನೇಹಿತೆ ಆರೋಪಿ ಶರ್ಮಿಳಾ ಅವರಿಂದ ಸಾಲಕ್ಕೆ ವ್ಯವಸ್ಥೆ ಮಾಡಿದ್ದಾಳೆ.

ಸಾಲಗಾರ ಸಾಲವನ್ನು ಮರುಪಾವತಿ ಮಾಡಿದ ನಂತರವೂ ಆರೋಪಿಗಳು ಆಕೆಗೆ ಕಿರುಕುಳ ನೀಡಲಾರಂಭಿಸಿ ಚೆಕ್ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದಾರೆ.

ಇನ್ನು 2016ರಿಂದ ಆರೋಪಿಗಳು ಸ್ವರೂಪಾ ಅವರಿಂದ 50 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ ಎನ್ನಲಾಗಿದೆ.

- Advertisement -

Related news

error: Content is protected !!