Tuesday, May 30, 2023
spot_imgspot_img
spot_imgspot_img

ಮಂಗಳೂರು: ಹಬ್ಬದ ಸಂಭ್ರಮದಲ್ಲಿದ್ದ ಬಾಲಕ ಅಪಘಾತಕ್ಕೆ ಬಲಿ..!!

- Advertisement -G L Acharya
- Advertisement -

ಮಂಗಳೂರು: ಸ್ಕೂಟಿ ಅಪಘಾತಕ್ಕೀಡಾಗಿ ಬಾಲಕನೋರ್ವ ಮೃತಪಟ್ಟ ಘಟನೆ ಮಂಗಳೂರು ಸುರತ್ಕಲ್‌ನ ಸೂರಿಂಜೆಯ ಕೋಟೆ ಎಂಬಲ್ಲಿ ನಡೆದಿದೆ.

ಸೂರಿಂಜೆ ಕೋಟೆ ನಿವಾಸಿ ಮುಹಮ್ಮದ್ ಮುಸ್ಲಿಯಾರ್ ಎಂಬವರ ಪುತ್ರ ಮಹಮ್ಮದ್ ಸೈಫ್ (13) ಮೃತಪಟ್ಟ ಬಾಲಕ.

ಈದುಲ್ ಫಿತ್ರ್ ಹಿನ್ನೆಲೆಯಲ್ಲಿ ಆರು ಮಂದಿ ಸ್ನೇಹಿತರು ಮೂರು ದ್ವಿಚಕ್ರ ವಾಹನಗಳಲ್ಲಿ ಸೂರಿಂಜೆಯಿಂದ ಸುರತ್ಕಲ್‌ಗೆ ಐಸ್ ಕ್ರೀಮ್ ತಿನ್ನಲು ತೆರಳುತ್ತಿದ್ದರು. ಈ ವೇಳೆ ಮನ್ಸೂರ್ ಎಂಬವರ ದ್ವಿಚಕ್ರ ವಾಹನದಲ್ಲಿ ಮಹಮ್ಮದ್ ಸೈಫ್ ಹಿಂಬದಿ ಸವಾರನಾಗಿದ್ದ.

ಇವರಿದ್ದ ಸ್ಕೂಟರ್ ಸೂರಿಂಜೆಯ ಕೋಟೆ ಎಂಬಲ್ಲಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿ ಬಿದ್ದಿದೆ. ಈ ವೇಳೆ ರಸ್ತೆಗೆ ಎಸೆಯಲ್ಪಟ್ಟು ಸೈಫ್ ಅವರ ತಲೆ ರಸ್ತೆಗೆ ಬಲವಾಗಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟನೆಂದು ತಿಳಿದು ಬಂದಿದೆ. ಈತ ಸೂರಿಂಜೆಯ ಹಿದಾಯತ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿ ಉತ್ತೀರ್ಣನಾಗಿ 8ನೇ ತರಗತಿಯಲ್ಲಿ ಕಲಿಯುತ್ತಿದ್ದ ಎಂದು ತಿಳಿದು ಬಂದಿದೆ. ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!