


ಮಂಗಿಲಪದವು: ನವಚೇತನ ಗೆಳೆಯರ ಬಳಗ ಇರುಂದೂರು ಪಡೀಲ್ ಇದರ ತೃತೀಯ ವರ್ಷದ ದಸರಾ ಕ್ರೀಡಾಕೂಟ ನಡೆಯಿತು.

ಕ್ರೀಡಾಕೂಟವನ್ನು ವೇದಮೂರ್ತಿ ಉದಯೇಶ ಕೆದಿಲಾಯ ಉದ್ಘಾಟಿಸಿದರು. ಎಂ.ಕೆ. ಕುಲಾಲ್ ಇರಂದೂರು ಪಡೀಲ್ ಇವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಚೆನ್ನಪ್ಪ ಗೌಡ ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ವಿಟ್ಲ, ಶಿವರಾಮ್ ಕುಲಾಲ್, ಅಧ್ಯಕ್ಷರು ಶ್ರೀ ನಾಗಬ್ರಹ್ಮ ಸೇವಾಟ್ರಸ್ಟ್ ಇರಂದೂರು, ಕೃಷ್ಣಪ್ಪ ಗೌಡ ನೆಡ್ಯಾರ್, ಅಧ್ಯಕ್ಷರು ಶ್ರೀ ದುರ್ಗಾ ಕಲಾಸಂಘ ಕರಿಂಕ, ಚಂದಪ್ಪ ಕುಲಾಲ್, ಹರೀಶ್ ಬಿ.ಮಾಡ, ರಾಮಣ್ಣ ಆಚಾರ್ಯ, ಶೋಭಾ ಮಾಡ ಉಪಸ್ಥಿತರಿದ್ದು ಕ್ರೀಡಾಕೂಟಕ್ಕೆ ಶುಭಹಾರೈಸಿದರು.

ಬಳಿಕ ಹಲವು ಆಟೋಟ ಸ್ಪರ್ದೆಗಳಲ್ಲಿ ಬಾಲಕ ಬಾಲಕಿಯರು, ಮಹಿಳೆ ಪುರುಷರು ಸೇರಿದಂತೆ ಎಲ್ಲರೂ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು. ಕೃಷ್ಣಯ್ಯ ಕೆ.ವಿಟ್ಲ ಇವರ ಅಧ್ಯಕ್ಷತೆಯಲ್ಲಿ ನಡೆದ ಕ್ರೀಡಾಕೂಟದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಆಶಾಕಾರ್ಯಕರ್ತೆಯರನ್ನು ಗೌರವಿಸಲಾಯಿತು.

