Saturday, June 28, 2025
spot_imgspot_img
spot_imgspot_img

ಮಣಿಪಾಲ : ಲಾಡ್ಜ್‌ವೊಂದರಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

- Advertisement -
- Advertisement -

ಮಣಿಪಾಲ : ಲಾಡ್ಜ್‌ವೊಂದರಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಮೃತರನ್ನು ಹೆರ್ಗಾ ಗ್ರಾಮದ ಬಿ ಪ್ರಭಾಕರ ಪೈ ಎಂಬವರ ಮಗ ವಿನಾಯಕ ಪೈ (35) ಎಂದು ಗುರುತಿಸಲಾಗಿದೆ.

ಇವರು 6 ತಿಂಗಳಿನಿಂದ ಯಾವುದೇ ಕೆಲಸ ವಿಲ್ಲದೇ ಇದ್ದು ವಿಪರೀತ ಮದ್ಯ ಸೇವನೆ ಮಾಡುವ ಅಭ್ಯಾಸ ಹೊಂದಿದ್ದರು. ಸುಮಾರು 2 ವರ್ಷಗಳ ಹಿಂದೆ ಲಿವರ್ ಸಮಸ್ಯೆ ಕಾಣಿಸಿದ್ದು ಮಣಿಪಾಲದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ, ನಿನ್ನೆ ಬೆಳಿಗ್ಗೆ ವಿನಾಯಕ ಮನೆಗೆ ಬಂದು ವಾಪಾಸು ಹೋಗಿದ್ದು ಸಂಜೆ ಕೂಡಾ ತಂದೆಯೊಂದಿಗೆ ಕರೆ ಮಾಡಿ ಮಾತನಾಡಿದ್ದರು.

ಆದರೆ ಇಂದು ಬೆಳಿಗ್ಗೆ ವಿನಾಯಕ ರವರು ಮಣಿಪಾಲ ಲಾಡ್ಜ್ ನಲ್ಲಿ ಅಸ್ವಸ್ಥಗೊಂಡು ಬಿದ್ದಿರುವುದು ಕಂಡು ಬಂದಿದ್ದು ಪರಿಶೀಲಿಸಿದಾಗ ಅವರು ಮೃತಪಟ್ಟಿರುವುದು ತಿಳಿದು ಬಂದಿದೆ. ಈ ಬಗ್ಗೆ ಮೃತರ ತಂದೆ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲವೊಂದರ ಪ್ರಕಾರ ಐಪಿಎಲ್ ಬೆಟ್ಟಿಂಗ್ ಗೀಳಿನಿಂದ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

- Advertisement -

Related news

error: Content is protected !!