ದಿಲ್ಲಿಯಲ್ಲಿ ಅಫ್ತಾಬ್‌ನ ಕರಾಳ ಮುಖ ಒಂದೊಂದೇ ಕಳಚಿ ಬೀಳುತ್ತಿದ್ದಂತೆ ಮತ್ತೋರ್ವನ ಕೌರ್ಯ ಬೆಳಕಿಗೆ ಬಂದಿದೆ. ಮುಸ್ಲಿಂ ಮತಕ್ಕೆ ಮತಾಂತರ ಆಗಲು ನಿರಾಕರಿಸಿದ ಪ್ರೇಯಸಿಯನ್ನು 4ನೇ ಅಂತಸ್ತಿನಿಂದ ದೂಡಿ ಹತ್ಯೆ ಮಾಡಿದ ಘಟನೆ ನಡೆದಿದೆ. ಲಖನೌನಲ್ಲಿ 19 ವರ್ಷದ ಹಿಂದೂ ಯುವತಿಯೊಬ್ಬಳನ್ನು ಆಕೆಯ ಪ್ರಿಯಕರ ಅಪಾರ್ಟ್‌ಮೆಂಟ್‌ನ 4ನೇ ಅಂತಸ್ತಿನಿಂದ ದೂಡಿ ಕೊಂದು ಹಾಕಿದ ಭೀಕರ ಘಟನೆ ನಡೆದಿದೆ. ನಿಧಿ ಗುಪ್ತಾ ಮೃತ ಯುವತಿ.
ಈಕೆಯನ್ನು ಮೊಹಮ್ಮದ್ ಸೂಫಿಯಾನ್ ಎಂಬ ಬಾಯ್‌ಫ್ರೆಂಡ್ ಅಪಾರ್ಟ್‌ಮೆಂಟ್‌ನಿಂದ ಕೊಂದು ನೂಕಿದ್ದಾನೆ. ಮತಾಂತರಗೊಂಡು ನಿಖಾ ಆಗಲು ಆಕೆ ನಿರಾಕರಿಸಿದ್ದೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಸದ್ಯ ಸೂಫಿಯಾನ್ ಪರಾರಿಯಾಗಿದ್ದು, ಆತನಿಗೆ ಶೋಧ ನಡೆದಿದೆ.
ಮತಾಂತರಕ್ಕೆ ಒತ್ತಾಯಿಸುತ್ತಿದ್ದ:
‘ಬ್ಯೂಟಿಷಿಯನ್ ಆಗಲು ಇಚ್ಛಿಸಿದ್ದ ನಿಧಿ ಹಾಗೂ ಸೂಫಿಯಾನ್ ಅಕ್ಕಪಕ್ಕದ ನಿವಾಸಿಗಳು. ನಿಧಿಯನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಯತ್ನಿಸುತ್ತಿದ್ದ ಸೂಫಿಯಾನ್, ಆಕೆಗೆ ಮುಸ್ಲಿಂ ಆಗಿ ಮತಾಂತರ ಆಗಲು ಹಾಗೂ ಮದುವೆ ಆಗಲು ಒತ್ತಡ ಹೇರುತ್ತಿದ್ದ. ಆಕೆಗೆ ಮೊಬೈಲ್ ಫೋನ್ ಕೊಡಿಸಿ ಸಂಪರ್ಕದಲ್ಲಿದ್ದ’ ಎಂದು ನಿಧಿ ಪೋಷಕರು ಆರೋಪಿಸಿದ್ದಾರೆ.
‘ಈ ವಿಷಯ ಗೊತ್ತಾದ ತಕ್ಷಣ ನಾವು ಸೂಫಿಯಾನ್ ಮನೆಗೆ ಹೋಗಿ, ಆತನ ಪಾಲಕರ ಮುಂದೆ ಆಕ್ರೋಶ ವ್ಯಕ್ತಪಡಿಸಿದೆವು. ಆಗ ಮಾತಿಗೆ ಮಾತು ಬೆಳೆದು ನಿಧಿಯನ್ನು ಅಪಾರ್ಟ್‌ಮೆಂಟ್ ಮೇಲೆ ಎಳೆದೊಯ್ದ ಸೂಫಿಯಾನ್, ಆಕೆಯನ್ನು 4ನೇ ಅಂತಸ್ತಿನಿಂದ ತಳ್ಳಿ ಸಾಯಿಸಿದ’ ಎಂದು ದೂರಿನಲ್ಲಿ ಪೋಷಕರು ಹೇಳಿದ್ದಾರೆ. ‘ನನ್ನ ಮಗಳು ಇಸ್ಲಾಂಗೆ ಮತಾಂತರ ಆಗಲು ಹಾಗೂ ಮದುವೆಗೆ ನಿರಾಕರಿಸಿದಳು. ಅದಕ್ಕೇ ಆಕೆಯನ್ನು ಆತ ಕೊಂದ’ ಎಂದು ಪೋಷಕರು ದೂರಿದ್ದಾರೆ.