- Advertisement -
- Advertisement -


ಮಾವಿನ ಹಣ್ಣು ಗಂಟಲಲ್ಲಿ ಸಿಲುಕಿ 10 ತಿಂಗಳ ಕಂದಮ್ಮ ಅಸುನೀಗಿದ ಘಟನೆ ನಡೆದಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ಎಡಕ್ಕರ ಎಂಬಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.
ಮಲಪ್ಪುರಂನ ಎಡಕ್ಕರ ನಿವಾಸಿ ಚೆರಾಯಿ ಕೂತ್ತಂಪಾರ ವಳ್ಳಿಕ್ಕಡನ್ ಫೈಸಲ್ ಅವರ ಪುತ್ರಿ ಫಾತಿಮಾ ಮಫರ್ಸಿನಾ ಮೃತ ಮಗು. ಮಗುವಿಗೆ ತಿನ್ನಲು ಕೊಟ್ಟ ಮಾವಿನ ಬೀಜ ಗಂಟಲಿನಲ್ಲಿ ಸಿಲುಕಿಕೊಂಡ ಕಾರಣ ಮಗುವಿಗೆ ಉಸಿರಾಟದ ತೊಂದರೆ ಉಂಟಾಗಿತ್ತು. ಕೂಡಲೇ ಪೋಷಕರು ಮಗುವನ್ನು ನಿಲಂಬೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ವಿಧಿಯಾಟಕ್ಕೆ ಮಗುವಿನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -