


ಮುಲ್ಕಿ : ಮಂಗಳೂರು ಹೊರವಲಯದ ಮುಲ್ಕಿಯ ಕ್ಯಾಂಟೀನ್‌ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು , ಕಾಂಟೀನ್ ನ ಮಾಲಕ ಅಪಾಯದಿಂದ ಪವಾಡ ಸದೃಶವಾಗಿ ಅಪಾಯದಿಂದ ಪಾರಾದ ಘಟನೆ ಮುಲ್ಕಿಯ ಕಾರ್ನಾಡು ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.

ಕಾರ್ನಾಡು ಖಾಸಗಿ ಆಸ್ಪತ್ರೆಯ ಎದುರುಗಡೆ ಕಾರ್ಯಾಚರಿಸುತ್ತಿರುವ ಕ್ಯಾಂಟೀನ್ ವೊಂದರಲ್ಲಿ ಈ ಅಗ್ನಿ ಅವಘಡ ಉಂಟಾಗಿದೆ. ಗ್ಯಾಸ್ ಸ್ಟವ್ ಹೊತ್ತಿಸುವಾಗ ಆಕಸ್ಮಿಕವಾಗಿ ಬೆಂಕಿ ಜ್ವಾಲೆ ಉಂಟಾಗಿ ಅಡುಗೆ ಅನಿಲದ ಸಿಲಿಂಡರ್ ಹೊತ್ತಿ ಉರಿದಿದ್ದು, ಅಂಗಡಿ ಮಾಲಿಕರಾದ 48 ವರ್ಷದ ಶೇಖರ್ ಎಂಬವರು ಪವಾಡ ಸದೃಶವಾಗಿ ಅಪಾಯದಿಂದ ಘಟನೆಯಲ್ಲಿ ಕ್ಯಾಂಟೀನ್ ಗೆ ಹಾನಿ ಉಂಟಾಗಿದೆ. ಕೂಡಲೇ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ.

ಬಳಿಕ ಸಿಲಿಂಡರ್ ಸ್ಪೋಟಗೊಳ್ಳುವ ಲಕ್ಷಣಗಳು ಕಾಣಿಸಿಕೊಂಡಾಗ ಸ್ಥಳೀಯರು ಆತಂಕಕ್ಕೆ ಈಡಾದರು. ಈ ಸಂದರ್ಭ ನಗರ ಪಂಚಾಯತ್ ಸಿಬ್ಬಂದಿ ಕಿಶೋರ್ ಕಾರ್ಯಪ್ರವೃತ್ತರಾಗಿ ನಗರ ಪಂಚಾಯತಿನಿಂದ ಅಗ್ನಿ ಶಾಮಕ ದಳವನ್ನು ತರಿಸಿ ಬೆಂಕಿಯನ್ನು ನಂದಿಸಲಾಯಿತು. ಬೆಂಕಿ ನಂದಿಸುವ ಭರದಲ್ಲಿ ಕ್ಯಾಂಟೀನ್ ನಡೆಸುತ್ತಿರುವ ಶೇಖರ್ ರವರ ಮುಖಕ್ಕೆ ಗಾಯಗಳಾಗಿದ್ದು ಮುಲ್ಕಿ , ಸರಕಾರಿ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.