Monday, July 7, 2025
spot_imgspot_img
spot_imgspot_img

ರೆಸ್ಟೋರೆಂಟ್ ನಲ್ಲಿ ಗೋಮಾಂಸ ಪದಾರ್ಥ ಬಡಿಸಿದ ಆರೋಪ; ರೆಸ್ಟೋರೆಂಟ್ ಮಾಲಕನ ಬಂಧನ

- Advertisement -
- Advertisement -

ಸೂರತ್‌ನಲ್ಲಿರುವ ರೆಸ್ಟೋರೆಂಟ್ ಮಾಲೀಕ ಸರ್ಫರಾಜ್ ಮೊಹಮ್ಮದ್ ವಜೀರ್ ಖಾನ್ ಅವರನ್ನು ತಮ್ಮ ಹೋಟೆಲ್‌ನಲ್ಲಿ ಗ್ರಾಹಕರಿಗೆ ಗೋಮಾಂಸ ನೀಡಿದ್ದಕ್ಕಾಗಿ ಬಂಧಿಸಲಾಗಿದೆ.

ಹಿಂದೂ ಸಂಘಟನೆಗಳು ರೆಸ್ಟೋರೆಂಟ್ ಮಾಲೀಕನ ವಿರುದ್ಧ ಅಧಿಕಾರಿಗಳಿಗೆ ದೂರು‌ ನೀಡಿದ್ದರು.

ಖಚಿತ ಮಾಹಿತಿ ಮೇರೆಗೆ ರೆಸ್ಟೊರೆಂಟ್ ಮೇಲೆ ದಾಳಿ ನಡೆಸಿದ ಪೊಲೀಸರು ರೆಫ್ರಿಜರೇಟರ್ ನಲ್ಲಿ ಶೇಖರಿಸಿಟ್ಟಿದ್ದ 60 ಕೆಜಿ ದನದ ಮಾಂಸ ವಶಪಡಿಸಿಕೊಂಡಿದ್ದಾರೆ.ಸೂರತ್‌ನ ಲಾಲ್‌ಗೇಟ್ ಪೊಲೀಸ್ ಠಾಣೆಯಲ್ಲಿ ರೆಸ್ಟೋರೆಂಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದ್ದು,ಆತನನ್ನು ಬಂಧಿಸಲಾಗಿದೆ.

ಹೊಡಿಬಂಗ್ಲಾ ಪ್ರದೇಶದ ಮಾಂಸಾಹಾರಿ ರೆಸ್ಟೊರೆಂಟ್‌ನಲ್ಲಿ ಗೋಮಾಂಸ ಬಡಿಸಲಾಗುತ್ತಿದೆ ಎಂದು ಲಾಲ್ಗೇಟ್ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ.

ಪೊಲೀಸರು ಪಶುವೈದ್ಯರನ್ನು ಘಟನಾ ಸ್ಥಳಕ್ಕೆ ಕರೆಸಿದರು ಮತ್ತು ಮಾಂಸದ ತಪಾಸಣೆಗೆ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದರು.ಎಫ್‌ಎಸ್‌ಎಲ್ ವರದಿಯಲ್ಲಿ 60 ಕೆಜಿ ಮಾಂಸದಲ್ಲಿ 20 ಕೆಜಿ ಹಸುವಿನ ಮಾಂಸ ಮತ್ತು 40 ಕೆಜಿ ಎಮ್ಮೆ ಮಾಂಸ ಇತ್ತು ಎಂದು ಹೇಳಲಾಗಿದೆ.

- Advertisement -

Related news

error: Content is protected !!