ಬೆಂಗಳೂರು: ಜಯ ಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಬಿ. ಗುಣರಂಜನ್ ಶೆಟ್ಟಿಯವರ ನೇತೃತ್ವದಲ್ಲಿ, ಪರಿಸರವಾದಿಗಳು ಹಾಗೂ ಸರೋವರ ಸಂರಕ್ಷಕರಾದ ಶ್ರೀಯುತ ಆನಂದ್ ಮಲ್ಲಿಗವಾಡ ಅವರ ಮಾರ್ಗದರ್ಶನದಲ್ಲಿ, ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀಯುತ ಆರ್. ಚಂದ್ರಪ್ಪರವರು ಹಾಗೂ ಬೆಂಗಳೂರು ಜಿಲ್ಲಾಧ್ಯಕ್ಷರಾದ ಶ್ರೀಯುತ ಜೆ. ಶ್ರೀನಿವಾಸ್ ರವರ ಅಧ್ಯಕ್ಷತೆಯಲ್ಲಿ ಮತ್ತು ನಮ್ಮ ಜಯಕರ್ನಾಟಕ ಜನಪರ ವೇದಿಕೆಯ ಅಂಗಸಂಸ್ಥೆಯಾದ ಐಕೇರ್ ಬ್ರಿಗೇಡ್ ನ ಸಹಯೋಗದೊಂದಿಗೆ,

ಬೆಂಗಳೂರಿನ ಸರ್ವೇ ನಂಬರ್ 14 ರಲ್ಲಿ 10 ಎಕರೆ 4 ಗುಂಟೆ ವಿಸ್ತೀರ್ಣ ಹೊಂದಿದ್ದ ಲಕ್ಕಸಂದ್ರ ಕೆರೆಯ ಜಾಗವನ್ನು. 5 ಎಕರೆ 4 ಗುಂಟೆ ಸರ್ಕಾರಿ ಕಲ್ಲುಬಂಡೆಯನ್ನಾಗಿ, ಉಳಿದ 5 ಎಕರೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಾಗಿ ಪರಿವರ್ತಿಸಿದ್ದು. ಈ ಕೂಡಲೆ ಇದನ್ನು ರದ್ದುಮಾಡಿ ಆರ್.ಟಿ.ಸಿ ದಾಖಲೆಯಲ್ಲಿ ಮತ್ತೆ ಕೆರೆಯನ್ನಾಗಿ ಸೇರಿಸಬೇಕೆಂದು,


ಬೆಂಗಳೂರಿನ ಸರ್ವೇ ನಂಬರ್ 14ರ ಲಕ್ಕಸಂದ್ರ ಕೆರೆಯನ್ನು ಬಿ.ಎಮ್.ಆರ್.ಸಿ.ಎಲ್ ಸಂಸ್ಥೆ ಮೆಟ್ರೋ ಕಾಮಗಾರಿಗಾಗಿ ಎಲ್ & ಟಿ ಕಂಪನಿಯವರಿಗೆ ವರ್ಗಾಯಿಸಿ. ಪ್ರಸ್ತುತ ಈ ಸ್ಥಳವನ್ನು ತಾತ್ಕಾಲಿಕವಾಗಿ ಮೆಟ್ರೋ ಕಾಮಗಾರಿಯ ಸ್ಥಳವಾಗಿ ಉಪಯೋಗಿಸುತ್ತಿದ್ದು. ಈ ಒಂದು ಯೋಜನೆ ಮುಗಿದ ತಕ್ಷಣ ತಾವುಗಳು ಮತ್ತೆ ಈ ಕೆರೆಯನ್ನು ಇಷ್ಟು ದಿನಗಳೊಳಗೆ ನಿರ್ಮಾಣಗೊಳಿಸುತ್ತೇವೆಂದು ತಿಳಿಯುವಕೆಯ ಜ್ಞಾಪಕ ಪತ್ರದಲ್ಲಿ (MOU Affidavit) ಸಹಿ ಮಾಡಿಕೊಡಬೇಕೆಂದು ಒತ್ತಾಯಿಸಿ,


ಘನವೆತ್ತ ನ್ಯಾಯಾಲಯದ ಆದೇಶದಂತೆ ಈ ಕೂಡಲೇ ಕೆರೆಯ ಜಾಗವನ್ನು ಸರ್ವೇಮಾಡಿ ಕಾನೂನು ಬಾಹಿರವಾಗಿ ಅತಿಕ್ರಮಣವಾಗಿರುವುದನ್ನು ತೆರವುಗೊಳಿಸಿ ಕೆರೆಯ ಜಾಗವನ್ನು ಹದ್ದುಬಸ್ತು ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪ ರವರನ್ನು ಭೇಟಿಮಾಡಿ ಅವರೊಂದಿಗೆ ಕೆಲವು ಸಮಯ ಚರ್ಚಿಸಿ ಮನವಿಯನ್ನು ಸಲ್ಲಿಸಿದರು, ಅವರು ಮನವಿಗೆ ಸ್ಪಂದಿಸಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜೊತೆ ಚರ್ಚಿಸಿ ಅತಿ ಬೇಗನೇ ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಐಕೇರ್ ಬ್ರಿಗೇಡ್ ಸಂಸ್ಥೆಯ ಪ್ರಸಾದ್ ಮತ್ತು ಶ್ರೀಮತಿ ಪೂರ್ಣಿಮ ರವರು ಶ್ರೀಮತಿ ಶಿಲ್ಪಾ ಹಾಗೂ ಸ್ಪೂರ್ತಿ ಇನ್ನಿತರರು ಉಪಸ್ಥಿತರಿದ್ದರು.










