


ವಿಟ್ಲ: ಆಸ್ತಿ ವಿಚಾರಕ್ಕೆ ನಡೆದ ಹಲ್ಲೆ ಸಂಬಂಧಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ. ಇಡ್ಕಿದು ಗ್ರಾಮದ ಉರಿಮಜಲು ಎಂಬಲ್ಲಿ ಆಸ್ತಿ ವಿಚಾರಕ್ಕೆ ಜಗಳ ನಡೆದಿದೆ. ಈ ಸಂಬಂಧ ಸಚಿನ್ ನೀಡಿದ ದೂರಿನ ಅನ್ವಯ ನಾಲ್ಕು ಮಂದಿಯ ವಿರುದ್ಧ ದೂರು ದಾಖಲಾಗಿದೆ. ನಾರಾಯಣ ಗೌಡ, ಚೇತನ್ ಕುಮಾರ, ರೋಹಿಣಿ, ಈಶ್ವರ ಎಂಬವರ ವಿರುದ್ಧ ದೂರು ದಾಖಲಾಗಿದೆ.
24-03-2023 ರಂದು ಇಡ್ಕಿದು ಗ್ರಾಮದ ಉರಿಮಜಲು ಎಂಬಲ್ಲಿರುವ ಮನೆಯಲ್ಲಿ ಬೆಳಿಗ್ಗೆ 08.15 ಗಂಟೆಯ ಸಮಯಕ್ಕೆ ಇರುವಾಗ ಸಚಿನ್ ಎಂಬವರು ತಂದೆಯ ಆಸ್ತಿಯಲ್ಲಿ ಪಂಚಾಯತಿಕೆ ಹಾಗೂ ನ್ಯಾಯಾಲಯ ಮೂಲಕ ಪಾಲು ಕೇಳಲು ಹೋಗಿದ್ದಾರೆ. ಈ ವೇಳೆ ಆಸ್ತಿಯಲ್ಲಿ ಪಾಲು ಹಾಗೂ ಜಮೀನಿನಲ್ಲಿ ಕಟ್ಟುತ್ತಿರುವ ಕಟ್ಟಡಕ್ಕೆ ಗ್ರಾಮ ಪಂಚಾಯತ್ ಮೂಲಕ ತಡೆಯಾಜ್ಞೆ ತಂದಿರುವ ಕಾರಣಕ್ಕೆ ಅಣ್ಣ ಚೇತನ್ ಕುಮಾರ್ ಸಚಿನ್ ಅವರನ್ನು ಉದ್ದೇಶಿಸಿ ನನ್ನ ಜಮೀನಿನಲ್ಲಿ ನಿನಗೆ ಪಾಲು ಇಲ್ಲ ಎಂದು ಹೇಳಿ ಗಟ್ಟಿಯಾಗಿ ಹಿಡಿದು, ಅಲ್ಲೆ ಇದ್ದ ತಾಯಿ ರೋಹಿಣಿಯಲ್ಲಿ, ತಂದೆ ಹಾಗೂ ಚಿಕ್ಕಪ್ಪನನ್ನು ಕರೆಯಿರಿ ಇವನನ್ನು ಹೊಡೆಯುವ ಎಂದಿದ್ದಾರೆ.
ತಾಯಿಯವರು, ತಂದೆ ನಾರಾಯಣಗೌಡ ಮತ್ತು ಚಿಕ್ಕಪ್ಪ ಈಶ್ವರರವರನ್ನು ಕರೆದುಕೊಂಡು ಬಂದಾಗ ತಂದೆ ಸಚಿನ್‌ರವರ ಎದೆಗೆ ಕಾಲಿನಿಂದ ತುಳಿದು, ಈಶ್ವರವರು ಹೊಟ್ಟೆಗೆ ತುಳಿದಿದ್ದು, ಚೇತನಕುಮಾರ್ ಎಡ ಕೈಗೆ ಚೂರಿಯಿಂದ ಇರಿದಿದ್ದಾರೆ. ಇದಕ್ಕೆಲ್ಲ ರೋಹಿಣಿಯವರು ಸಹಕರಿಸಿದ್ದು ಅಲ್ಲಿಂದ ತಪ್ಪಿಸಿಕೊಂಡು ಹೋಗುವಾಗ ಈಗ ನೀನು ಓಡಿದ್ದೀಯಾ ನಿನ್ನನ್ನು ಸುಪಾರಿ ಕೊಟ್ಟು ಕೊಲ್ಲದೆ ಬಿಡುವುದಿಲ್ಲ ಎಂದು ತಂದೆ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಗಾಯಾಳು ಸಚಿನ್ ವಿಟ್ಲ ಸರಕಾರಿ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಿದ್ದಾಗಿ ದೂರಿನಲ್ಲಿ ಸಚಿನ್ ಉಲ್ಲೇಖಿಸಿದ್ದಾರೆ.