Saturday, July 5, 2025
spot_imgspot_img
spot_imgspot_img

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -
driving

ಉಪ್ಪಿನಂಗಡಿ: ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಪ್ರಕ್ರಿಯೆ ನಡೆಯಿತು. ಪದಾಧಿಕಾರಿಗಳ ಪಟ್ಟಿಯನ್ನು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಪತ್ರಿಕಾಗೋಷ್ಟಿಯಲ್ಲಿ ಬಿಡುಗಡೆಗೊಳಿಸಿದ್ದು, ಸಮಿತಿಯಲ್ಲಿ 4 ಮಂದಿ ಪ್ರಧಾನ ಕಾರ್‍ಯದರ್ಶಿಗಳು, 9 ಮಂದಿ ಉಪಾಧ್ಯಕ್ಷರುಗಳು, 9 ಮಂದಿ ಕಾರ್‍ಯದರ್ಶಿಗಳು, ಇಬ್ಬರು ವಕ್ತಾರರು ಒಳಗೊಂಡಿದ್ದು, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಪ್ರಧಾನ ಕಾರ್‍ಯದರ್ಶಿಗಳಾಗಿ ಜಗನ್ನಾಥ ಶೆಟ್ಟಿ ಕೋಡಿಂಬಾಡಿ, ಅಬ್ದುಲ್ ರಹಿಮಾನ್ ಯುನಿಕ್ ನೆಕ್ಕಿಲಾಡಿ, ಸುನೀತಾ ಕೋಟ್ಯಾನ್ ವಿಟ್ಲ, ವಿ.ಎ. ರಶೀದ್. ಉಪಾಧ್ಯಕ್ಷರುಗಳಾಗಿ ಅಶ್ರಫ್ ಬಸ್ತಿಕ್ಕಾರ್ (ಉಪಾಧ್ಯಕ್ಷರು ಮತ್ತು ವಕ್ತಾರರು), ಜಯರಾಮ ಬಲ್ಲಾಳ್ ಮಾಣಿಲ, ಪದ್ಮನಾಭ ಪೂಜಾರಿ ಸಣ್ಣಗುತ್ತು, ಶ್ರೀಧರ ಶೆಟ್ಟಿ ಪುಣಚ, ಪ್ರಭಾಕರ ಭಟ್ ಮಾವೆ, ಮಿತ್ರದಾಸ ರೈ ಪೆರ್ನೆ, ರಾಲ್ಫಿ ಡಿ’ಸೋಜಾ ಪೆರುವಾಯಿ, ಆದಂ ಕುಂಞ ಕೆದಿಲ, ನಾರಾಯಣ ಗೌಡ ಬಲ್ನಾಡು.

ಕಾರ್‍ಯದರ್ಶಿಗಳಾಗಿ ಎಸ್.ಕೆ. ಮಹಮ್ಮದ್ ವಿಟ್ಲ (ಕಚೇರಿ ಕಾರ್‍ಯದರ್ಶಿ), ಸಿದ್ದಿಕ್ ಪೆರುವಾಯಿ, ಮಹಮ್ಮದ್ ಸಿರಾಜ್ ಪುಣಚ, ಸುಂದರ ಮಲ್ಲಡ್ಕ, ಸುಬ್ರಹ್ಮಣ್ಯ ಗೌಡ, ಜಗದೀಶ ಶೆಟ್ಟಿ ಅಳಿಕೆ, ಸತೀಶ್ ಶೆಟ್ಟಿ ಹಿರೇಬಂಡಾಡಿ, ಅಬ್ದುಲ್ ರಹಿಮಾನ್ ಕುರುಂಬಳ, ಶೇಖ್ ಆಲಿ ಶೇರಾಜೆ. ರಮಾನಾಥ ವಿಟ್ಲ (ವಕ್ತಾರರು).

ಸದಸ್ಯರುಗಳಾಗಿ ರಾಜ ನೆಕ್ಕಿಲಾಡಿ, ಅನಿತಾ ಕೇಶವ ಗೌಡ ವಳಾಲು, ಶೀನಪ್ಪ ಪೂಜಾರಿ ಮಾವಿನಕಟ್ಟೆ, ಧೀರಜ್ ಗೌಡ ಕೊಡಿಪ್ಪಾಡಿ, ಪದ್ಮ ಪೆಲತ್ತಡಿ ಕುಳ, ಫಾರೂಕ್ ಮುರ, ಅಬ್ದುಲ್ ರಶೀದ್ ಮುರ, ಹಂಸ ಗಡಿಯಾರ, ಸುಲೈಮಾನ್ ಸರೋಳಿ, ಮಹಮ್ಮದ್ ಶರೀಫ್ ಬಲ್ನಾಡು, ತನಿಯಪ್ಪ ಪೂಜಾರಿ ಬಿಳಿಯೂರು, ನೆಫೀಸಾ ಪೆರುವಾಯಿ.

ಮುಂಚೂಣಿ ಘಟಕಗಳ ಅಧ್ಯಕ್ಷರಾಗಿ ಅಲ್ಪ ಸಂಖ್ಯಾತ ಘಟಕ – ಅಬ್ದುಲ್ ಕರೀಂ ಕುದ್ದುಪದವು, ಎಸ್.ಸಿ. ಘಟಕ-ರಾಮಣ್ಣ ಪಿಲಿಂಜ, ಮಹಿಳಾ ಘಟಕ-ಶಕುಂತಳಾ ಕುಲಾಲ್ ಗಡಿಯಾರ, ಹಿಂದುಳಿದ ವರ್ಗ-ಮೋಹನ್ ಗುರ್ಜಿನಡ್ಕ, ಕಾರ್ಮಿಕ ಘಟಕ-ಶ್ರೀನಿವಾಸ ಶೆಟ್ಟಿ ಕೊಲ್ಯ, ಅಸಂಘಟಿತ ಕಾರ್ಮಿಕ ಘಟಕ-ಸೇಸಪ್ಪ ನೆಕ್ಕುಲು ಹಿರೇಬಂಡಾಡಿ, ಕಿಸಾನ್ ಘಟಕ-ಎಲ್ಯಣ್ಣ ಪೂಜಾರಿ ಮಿರುಂಡ, ಸಾಮಾಜಿಕ ಜಾಲತಾಣ-ಅನಿಲ್ ಅಮೀನ್ ಪುಣಚ, ಯುವಕ ಕಾಂಗ್ರೆಸ್-ಸಿದ್ದಿಕುಲ್ ಅಕ್ಬರ್ ಇವರುಗಳನ್ನು ಆಯ್ಕೆ ಮಾಡಲಾಗಿ ಪಟ್ಟಿ ಬಿಡುಗಡೆ ಮಾಡಲಾಗಿದೆ.

- Advertisement -

Related news

error: Content is protected !!