- Advertisement -
- Advertisement -


ವಿಟ್ಲ: ಎನ್‌ಸಿಸಿ ಕೆಡೆಟ್ ವಿದ್ಯಾರ್ಥಿನಿ ತನುಷಾ ಸಿ.ಕೆ ಸುಮಾರು ಎರಡು ಕಿಲೋಮೀಟರುವರೆಗೆ ಮಾರ್ಗದ ಎರಡು ಬದಿಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್, ಕಸ ಮತ್ತು ಪ್ಲಾಸ್ಟಿಕ್ ಬಾಟಲಿಗಳನ್ನು ಸ್ವಚ್ಛಗೊಳಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ.

ಚಂದಳಿಕೆ- ಅತಿಕಾರಬೈಲು-ಕಟ್ಟೆತಿಲವರೆಗೆ ಸ್ವಚ್ಛಗೊಳಿಸಿದ್ದು, ಈ ಮೊದಲು ತನ್ನ ಮನೆಯ ಪಕ್ಕದಲ್ಲಿ ಕಸ ಕಡ್ಡಿಗಳಿಂದ ತುಂಬಿ ಕೊಚ್ಚೆಯಂತ್ತಿದ್ದ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದಳು.

ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಈಕೆ ವಿವೇಕಾನಂದ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಎನ್‌ಸಿಸಿ ಶಿಕ್ಷಕರಾದ ಲೆಫ್ಟಿನೆಂಟ್ ಭಾಮಿ ಅತುಲ್ ಶೆಣೈರವರ ವಿದ್ಯಾರ್ಥಿನಿ.

ವಿಟ್ಲ ಮುಡ್ನೂರು ಗ್ರಾಮದ ಚಂದ್ರಶೇಖರ ಗೌಡ ಹಾಗೂ ಹರಿಣಾಕ್ಷಿ ದಂಪತಿಯ ಪುತ್ರಿಯಾಗಿದ್ದಾಳೆ. ವಿಟ್ಲದ ಈ ವಿದ್ಯಾರ್ಥಿನಿಯ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ.


- Advertisement -