Friday, May 20, 2022
spot_imgspot_img
spot_imgspot_img

ವಿಟ್ಲ: ಸಹೋದರರ ನಡುವೆ ಜಗಳ; ಒಡಹುಟ್ಟಿದ ತಮ್ಮನನ್ನೇ ಕೊಲೆಗೈದ ಸಹೋದರ..!

- Advertisement -
- Advertisement -

ವಿಟ್ಲ: ಸಹೋದರರ ನಡುವೆ ಗಲಾಟೆ ನಡೆದು ಅಣ್ಣನೇ ತಮ್ಮನ್ನನ್ನು ಕೊಲೆಗೈದ ಘಟನೆ ವಿಟ್ಲದ ಶಿರಂಕಲ್ಲು ನಂದರಬೆಟ್ಟು ಎಂಬಲ್ಲಿ ನಡೆದಿದೆ.

ಮೃತರನ್ನು ಬಾಲಪ್ಪ ನಾಯ್ಕ ಹಾಗೂ ಆರೋಪಿಯನ್ನು ಐತಪ್ಪ ನಾಯ್ಕ ಎನ್ನಲಾಗಿದೆ.

ಬಾಲಪ್ಪ ನಾಯ್ಕ ಮತ್ತು ಐತಪ್ಪ ನಾಯ್ಕ ಇಬ್ಬರು ಸಹೋದರರಾಗಿದ್ದು, ಕೆಲ ದಿನಗಳಿಂದ ಇವರಿಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಇಂದು ಹೊಸ ಮನೆಯಲ್ಲಿ ಗೊಂದೋಳು ಪೂಜೆ ನಡೆಯುತ್ತಿದ್ದು, ಈ ವೇಳೆ ಸಹೋದರರಿಬ್ಬರೂ ಹಳೆ ಮನೆಯಲ್ಲಿ ಜಗಳವಾಡಿದ್ದು, ಜಗಳ ತಾರಕ್ಕಕ್ಕೇರಿ ಅಣ್ಣ ತಮ್ಮನ್ನನ್ನೇ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

- Advertisement -

Related news

error: Content is protected !!