Tuesday, May 30, 2023
spot_imgspot_img
spot_imgspot_img

ಸುರತ್ಕಲ್‌: “ಕುಡ್ಲ ಕಬಡ್ಡಿ-2023” ಇದರ ಉದ್ಘಾಟನಾ ಸಮಾರಂಭ

- Advertisement -G L Acharya
- Advertisement -

ಸುರತ್ಕಲ್: ವರುಣ್ ಶೇಣವ ಅವರ ನೇತೃತ್ವದಲ್ಲಿ ನಡೆದ ಸೇವಾ ಶಿಖರ್ ಫೌಂಡೇಶನ್ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಮಂಗಳೂರು ತಾಲೂಕು ಕಬಡ್ಡಿ ಅಸೋಸಿಯೇಷನ್ ಇದರ ಸಹಯೋಗದಲ್ಲಿ “ಕುಡ್ಲ ಕಬಡ್ಡಿ-2023” ಇದರ ಉದ್ಘಾಟನಾ ಸಮಾರಂಭ ಆದಿತ್ಯವಾರ ಬೆಳಗ್ಗೆ ಪಣಂಬೂರಿನ ಎನ್ಎಂಪಿಎ ಮೈದಾನದಲ್ಲಿ ಜರುಗಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಬಂಟರ ಯಾನೆ ನಾಡವರ ಮಾತ್ರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಮಾಲಾಡಿ ಉದ್ಘಾಟಿಸಿ ಮಾತನಾಡಿದ ಅವರು, “ಸಮಾಜಕ್ಕೆ ಸೇವೆ ಸಲ್ಲಿಸಲು ಯಾವ ಜಾತಿ ಧರ್ಮವೂ ಬೇಕಾಗಿಲ್ಲ. ಸೇವೆಗಾಗಿ ನಿರ್ಮಿಸಿರುವ ಸೇವಾ ಶಿಖರ್ ಸಂಘಟನೆ ಸಾಮಾಜಿಕ ಕಳಕಳಿಯ ಮೂಲಕ ಸೇವೆಯ ಶಿಖರವನ್ನು ಏರಲಿ” ಎಂದು ಶುಭ ಹಾರೈಸಿದರು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ಮಾತನಾಡಿ “ಕಬಡ್ಡಿಯಂತಹ ದೇಶೀಯ ಕ್ರೀಡೆ ಇಂದು ಅಳಿವಿನ ಅಂಚಿನಲ್ಲಿದೆ. ಆದರೆ ಯುವಕರು ಇಂತಹ ಕ್ರೀಡೆಗಳತ್ತ ಅಕರ್ಷಿತರಗುತ್ತಿರುವುದು ಒಳ್ಳೆಯ ಬೆಳವಣಿಗೆ. ಕಬಡ್ಡಿ ಟೂರ್ನಮೆಂಟ್ ಹಮ್ಮಿಕೊಂಡಿರುವ ಸಂಘಟನೆ ಇನ್ನಷ್ಟು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಲಿ” ಎಂದು ಶುಭ ಹಾರೈಸಿದರು.

ಇತ್ತೀಚಿಗೆ ಕರ್ತವ್ಯ ಸಂದರ್ಭ ವೀರ ಮರಣವನ್ನಪ್ಪಿದ ಶಕ್ತಿನಗರದ ಯೋಧ ಮುರಳೀಧರ ರೈ ಅವರ ಕುಟುಂಬಕ್ಕೆ ಬಂಟರ ಯಾನೆ ನಾಡವರ ಮಾತೃಸಂಘದ ವತಿಯಿಂದ 50,000 ರೂ., ಬಂಟರ ಯಾನೆ ನಾಡವರ ಮಂಗಳೂರು ಸಮಿತಿ ವತಿಯಿಂದ 50,000 ರೂ. ಹಾಗೂ ಸೇವಾ ಶಿಖರ್ ಸಂಘಟನೆಯ ವತಿಯಿಂದ 10,000 ಧನ ಸಹಾಯದ ಚೆಕ್ ವರುಣ್ ಶೇಣವ ಅವರಿಂದ ಹಸ್ತಾಂತರ ಮಾಡಲಾಯಿತು.

ವೇದಿಕೆಯಲ್ಲಿ ಪಣಂಬೂರು ನಂದನೇಶ್ವರ ದೇವಸ್ಥಾನದ ಅನಂತ ಐತಾಳ್, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಗುರುಚಂದ್ರ ಹೆಗಡೆ, ಮಂಗಳೂರು ಕಂಬಳ ಸಮಿತಿಯ ಅಧ್ಯಕ್ಷರಾದ ಕ್ಯಾಪ್ಟನ್ ಬೃಜೇಶ್ ಚೌಟ, ಮಂಗಳೂರು ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಸುಜಿತ್ ಪ್ರತಾಪ್, ಮಂಗಳೂರು ಕಂಬಳ ಸಮಿತಿ ಉಪಾಧ್ಯಕ್ಷರಾದ ಸಚಿನ್ ಶೆಟ್ಟಿ ಸಾಂತ್ಯ, ಆಶಾ ಜ್ಯೋತಿ ರೈ, ರವೀಂದ್ರ ನಾಥ್ ಶೆಟ್ಟಿ, ಪುರುಷೋತ್ತಮ್, ಕೆ.ಎಂ. ಶೆಟ್ಟಿ, ರಾಮ್ ಮೋಹನ್ ರೈ, ಉಲ್ಲಾಸ್ ಶೆಟ್ಟಿ ಪೆರ್ಮುದೆ, ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಲೀಲಾಕ್ಷ ಕರ್ಕೇರ, ಜಯರಾಮ್ ಶಾಂತ, ಲೋಕೇಶ್ ಭಂಡಾರಿ, ಕಿಶೋರ್ ಕುಮಾರ್ ಪುತ್ತೂರು, ಸೇವಾ ಶಿಖರ್ ಮೆನೇಜಿಂಗ್ ಟ್ರಷ್ಟಿ ವರುಣ್ ಶೇಣವ ಮತ್ತಿತರರು ಉಪಸ್ಥಿತರಿದ್ದರು.

- Advertisement -

Related news

error: Content is protected !!