Monday, June 30, 2025
spot_imgspot_img
spot_imgspot_img

ಸುಳ್ಯ: ಈಚರ್ ಲಾರಿಯಲ್ಲಿ ಅಕ್ರಮ ಗೋ ಸಾಗಾಟ; 25 ಕ್ಕೂ ಹೆಚ್ಚು ದನಗಳು ವಶಕ್ಕೆ!

- Advertisement -
- Advertisement -
vtv vitla
vtv vitla

ಸುಳ್ಯ: ಸುಳ್ಯ ಹಾಗೂ ಮಡಿಕೇರಿಯ ಗಡಿ ಪ್ರದೇಶವಾದ ಸಂಪಾಜೆ ಗೇಟಿನಲ್ಲಿ ವಾಹನ ತಪಾಸಣೆ ವೇಳೆ ಈಚರ್ ಲಾರಿಯೊಂದರಲ್ಲಿ 25 ಕ್ಕೂ ಹೆಚ್ಚು ದನಗಳು ಪತ್ತೆಯಾದ ಘಟನೆ ಜ.25ರಂದು ವರದಿಯಾಗಿದೆ.

ರಾತ್ರಿ ಮಡಿಕೇರಿ ಕಡೆಯಿಂದ ಈಚರ್ ಲಾರಿಯಲ್ಲಿ ದನಗಳನ್ನು ತುಂಬಿಕೊಂಡು ಬರಲಾಗಿತ್ತು. ಸಂಪಾಜೆ ಗೇಟಿನಲ್ಲಿ ಸಿಬ್ಬಂದಿಗಳು ವಿಚಾರಣೆ ನಡೆಸಿದಾಗ ಇದು ದನದ ಫುಡ್ ಸಾಗಾಟ ಎಂದು ಚಾಲಕ ಹೇಳಿದನೆಂದೂ ಗೇಟಿನ ಸಿಬ್ಬಂದಿಗಳಿಗೆ ಅನುಮಾನ ಬಂದು ಲಾರಿಯನ್ನು ಪರಿಶೀಲನೆ ನಡೆಸಿದಾಗ ದನದ ಫುಡ್ ನ ಜತೆಗೆ 25 ಕ್ಕೂ ಹೆಚ್ಚು ದನಗಳು ಕಂಡು ಬಂದಿದೆ.

ಚಾಲಕನನ್ನು ಮತ್ತಷ್ಟು ಪ್ರಶ್ನೆ ಮಾಡಿದಾಗ ಆತ ಹಾಗೂ ಈಚರ್ ಗಾಡಿಯಲ್ಲಿದ್ದ ಮತ್ತೊಬ್ಬ ಪರಾರಿಯಾಗಿದ್ದಾರೆ. ಇದೀಗ ಲಾರಿ ಸಂಪಾಜೆ ಗೇಟಿನಲ್ಲಿದ್ದು, ಇದು ಎಲ್ಲಿಂದ ಬರುತ್ತಿತ್ತು ಮತ್ತು ಎಲ್ಲಿಗೆ ಕೊಂಡೊಯ್ಯಲಾಗುತ್ತಿತ್ತೆಂದು ಎಂಬುದರ ಬಗ್ಗೆ ಇಲಾಖೆಯವರು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!