Friday, August 19, 2022
spot_imgspot_img
spot_imgspot_img

ಸುಳ್ಯ: 4 ವರ್ಷದ ಮಗಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ..! ಅದೃಷ್ಟವಶಾತ್ ಬದುಕುಳಿದ ಕಂದಮ್ಮ

- Advertisement -G L Acharya G L Acharya
- Advertisement -

ಸುಳ್ಯ: ನಾಲ್ಕು ವರ್ಷದ ಮಗಳೊಂದಿಗೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೇವಚಳ್ಳ ಗ್ರಾಮದ ತಳೂರು ಎಂಬಲ್ಲಿ ನಡೆದಿದೆ. ತಾಯಿ ಸಾವನ್ನಪ್ಪಿದ್ದು ಮಗು ಅದೃಷ್ಟವಶಾತ್ ಬದುಕುಳಿದಿದೆ.

ಅಗ್ನಿಶಾಮಕ ದಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ದಯಾನಂದ ಎಂಬವರ ಪತ್ನಿ ಗೀತಾ ಎನ್‌ಎಂಸಿಯಲ್ಲಿ ಕ್ಲರ್ಕ್ ಆಗಿ ಕೆಲಸಮಾಡುತ್ತಿದ್ದರು. ಗೀತಾ ತನ್ನ 4 ವರ್ಷದ ಮಗಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮುಂಜಾನೆ ಎದ್ದಾಗ ಗೀತಾ ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಹುಡುಕಾಡಿದಾಗ ಬಾವಿಯಲ್ಲಿ ಮಗಳು ಮತ್ತು ಪತ್ನಿ ಬಿದ್ದಿರುವುದು ಕಂಡುಬಂತು. ಮಗಳು ಬಾವಿಯೊಳಗೆ ಕಲ್ಲಿನ‍ ಸಹಾಯದಿಂದ ಬದುಕುಳಿದಿದ್ದು, ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

- Advertisement -

Related news

error: Content is protected !!