


ಕನ್ನಡ ಸಂಘ ಬಹರೇನ್ ಇದರ “ಕನ್ನಡ ಭವನ ಉದ್ಘಾಟನೆ ಸಮಾರಂಭ”ವು ಸೆಪ್ಟೆಂಬರ್ 23 ಶುಕ್ರವಾರದಂದು ಸಂಜೆ: 4.30ಕ್ಕೆ ಕಿಂಗ್‌ಡಮ್ ಸಭಾಂಗಣ, ನ್ಯೂ ಮಿಲೇನಿಯಮ್ ಸ್ಕೂಲ್, ಜಿಂಜ್, ಬಹ್ರೈನ್‌ನಲ್ಲಿ ನಡೆಯಲಿದೆ.
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ಇವರು ಕನ್ನಡ ಭವನದ ಉದ್ಘಾಟನೆಯನ್ನು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿ.ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ , ಪೀಯೂಪ್ ಶ್ರೀವಾಸ್ತವ, ಭಾರತದ ರಾಯಭಾರಿಗಳು, ಬಹ್ರೈನ್ ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಪ್ರದೀಪ್ ಶೆಟ್ಟಿ, ಅಧ್ಯಕ್ಷರು ಕನ್ನಡ ಸಂಘ ಬಹ್ರೈನ್ ವಹಿಸಲಿದ್ದಾರೆ.

ಅತಿಥಿಗಳಾಗಿ ಬಿ. ವೈ ವಿಜಯೇಂದ್ರ, ರಾಜ್ಯ ಉಪಾಧ್ಯಕ್ಷರು, ಭಾರತೀಯ ಜನತಾ ಪಕ್ಷ ಕರ್ನಾಟಕ, ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ನಾಡೋಜ ಡಾ. ಮಹೇಶ ಜೋಶಿ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಡಾ. ಆರತಿ ಕೃಷ್ಣ, ಮಾಜಿ ಅಧ್ಯಕ್ಷರು ಅನಿವಾಸಿ ಕನ್ನಡಿಗರ ವೇದಿಕೆ, ನಾಡೋಜ ಡಾ. ಮನು ಬಳಿಗಾರ್, ನಿಕಟಪೂರ್ವ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್, ಡಾ. ವರ್ಗೀಸ್ ಕುರಿಯನ್, ಅಧ್ಯಕ್ಷರು, ವಿಕೆಎಲ್ ಹೋಲ್ಡಿಂಗ್ ಮತ್ತು ಆರ್ ನಮಾಲ್ ಗ್ರೂಪ್, ವಿಶ್ವೇಶ್ವರ್ ಭಟ್, ಪ್ರಧಾನ ಸಂಪಾದಕರು, ವಿಶ್ವವಾಣಿ ಪತ್ರಿಕೆ, ರವಿ ಹೆಗಡೆ, ಪ್ರಧಾನ ಸಂಪಾದಕರು, ಕನ್ನಡಪ್ರಭ ದಿನಪತ್ರಿಕ ಮತ್ತು ಸುವರ್ಣ ಸುದ್ದಿ ವಾಹಿನಿ, ಯುಸುಫ್ ಲೋರಿ, ನಿರ್ದೇಶಕರು,ಮಾಹಿತಿ ಮತ್ತು ಅನುಸರಣೆ, ಕ್ಯಾಪಿಟಲ್ ಗವರ್ನರೇಟ್ ಕಿಂಗ್‌ಡಮ್ ಆಫ್ ಬಹ್ರೈನ್, ಕೆ. ಪ್ರಕಾಶ್ ಶೆಟ್ಟಿ, ಅಧ್ಯಕ್ಷರು, ಎಮ್‌ಆರ್‌ಜಿ ಗ್ರೂಪ್, ಗಿರೀಶ್ ರಾವ್ ಹತ್ವಾರ್,ಲೇಖಕರು, ಪತ್ರಕರ್ತರು ಭಾಗವಹಿಸಲಿದ್ದಾರೆ.

ಮೊಹಮ್ಮದ್ ಮನ್ಸೂರ್,ವ್ಯವಸ್ಥಾಪಕ ನಿರ್ದೇಶಕರು-ಸಾರಾ ಗ್ರೂಪ್, ಸಲಹೆಗಾರರು,ಬಹ್ರೈನ್ ಕ್ರಿಕೆಟ್ ಬೋರ್ಡ್, ವಿ. ಕೆ. ರಾಜಸೇಖರನ್ ಪಿಳ್ಳೆ, ಅಧ್ಯಕ್ಷರು, ನ್ಯಾಷನಲ್ ಗ್ರೂಪ್ ಆಫ್ ಕಂಪನೀಸ್, ಕೆ. ಮೋಹನ್‌ದೇವ್ ಆಳ್ವಾ, ಅಧ್ಯಕ್ಷರು, ಅಖಿಲ ಕರ್ನಾಟಕ ಮಕ್ಕಳ ಕೂಟ,
ಆನಂದ್ ಭಟ್, ಉದ್ಯಮಿಗಳು, ಕೆ. ಬಿ, ಬಾಬುರಾಜನ್, ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಬಿಕೆಜಿ ಹೋಲ್ಡಿಂಗ್, ಬಹ್ರೈನ್,ಕತಾರ್, ಒಮಾನ್, ವಕವಾಡಿ ಪ್ರವೀಣ್ ಶೆಟ್ಟಿ, ಅಧ್ಯಕ್ಷರು, ಫಾರ್ಜೊನ್ ಗ್ರೂಪ್ ಆಫ್ ಹೊಟೆಲ್ಸ್, ಯುಎಇ, ನವೀನ್ ಡಿ. ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರು, ಔಮಾ ಮಿಡಲ್ ಈಸ್ಟ್, ನವೀನ್ ಕುಮಾರ್ ಶೆಟ್ಟಿ, ರಿಪಾ, ಬಹ್ರೈನ್ ಇವರುಗಳ ಗೌರವ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ನಡೆಯಲಿದೆ.
