- Advertisement -
- Advertisement -

ವಿಜಯಪುರ: ಸ್ಯಾಂಡಲ್ ವುಡ್ ಖ್ಯಾತ ಹಾಸ್ಯ ನಟ ರಾಜು ತಾಳಿಕೋಟೆ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಅಕ್ಕನ ಪುತ್ರನ ಪತ್ನಿಯ ಮೇಲೆ ಹಲ್ಲೆ ಹಾಗೂ ಬಲವಂತದಿಂದ ವಿಷಕುಡಿಸಲು ಯತ್ನ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಕೌಟುಂಬಿಕ ಕಲಹ ವಿಚಾರವಾಗಿ ಸೋದರಳಿಯನ ಪತ್ನಿ ಮೇಲೆ ರಾಜು ತಾಳಿಕೋಟೆ ಹಾಗೂ ಪತ್ನಿ ಪ್ರೇಮಾ ಇನ್ನಿತರರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಸೋದರಳಿಯ ಫಯಾಜ್ ಅವರ ಪತ್ನಿ ಸನಾ ಕರಜಗಿ ಮೇಲೆ ಹಲ್ಲೆ ನಡೆಸಿದ್ದು, ಬಲವಂತವಾಗಿ ವಿಷ ಕುಡಿಸಲು ಯತ್ನಿಸಿದ್ದಾರೆ. ಸನಾ ಕರಜಗಿಯನ್ನು ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣ ಸಂಬಂಧ ಸನಾ ತಾಯಿ ಫಾತಿಮಾ ವಿಜಯಪುರ ಮಹಿಳಾ ಠಾಣೆಗೆ ದೂರು ನೀಡಿದ್ದು, ನಟ ರಾಜು ತಾಳಿಕೋಟೆ, ಪತ್ನಿ ಪ್ರೇಮಾ, ಫಯಾಜ್ ಕರಜಗಿ, ಸನಾ ಭಾವ ಪಿಂಟು ಸೇರಿ 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -