


ಸ್ವಂತ ಸಹೋದರನನ್ನೇ ಕೊಂದು ಶವವನ್ನು ಫ್ರಿಡ್ಜ್‌ನಲ್ಲಿಟ್ಟು ಪರಾರಿಯಾದ ಘಟನೆ ನಡೆದಿದೆ. ನಗನಗದು ದೋಚುವ ಉದ್ದೇಶದಿಂದ ಕೊಲೆ ಮಾಡಲಾಗಿದೆ. 50 ವರ್ಷದ ಝಾಕಿರ್ ಕೊಲೆಯಾದವ. ಈ ಪ್ರಕರಣವನ್ನು ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಘಟನೆ ದೆಹಲಿಯ ಸೀಲಂಪುರದ ಮನೆಯೊಂದರಲ್ಲಿ ನಡೆದು ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿತ್ತು..!
ಜುಲೈ 22 ರಂದು ಮನೆಯೊಂದರ ಫ್ರಿಡ್ಜ್‌ನಲ್ಲಿ ಝಾಕಿರ್ ಎಂಬಾತನ ಶವ ಸಿಕ್ಕಿದೆ. ಝಾಕಿರ್‌ನ ಸಹೋದರರಾದ ಅಬಿದ್ ಹುಸೇನ್ ಮತ್ತು ಜಾಹಿದ್ ಕೊಲೆಗೈದ ಪಾತಕರು. ಇಬ್ಬರನ್ನೂ ಸಹ ಪೊಲೀಸರು ಬಂಧಿಸಿದ್ದಾರೆ.

ಝಾಕಿರ್ ಮನೆಯಲ್ಲಿ ಒಬ್ಬನೇ ವಾಸವಾಗಿದ್ದ. ಆತ ಮನೆಯಲ್ಲಿ ಸಾಕಷ್ಟು ಹಣ, ಚಿನ್ನಾಭರಣ ಇಟ್ಟಿರುವ ಬಗ್ಗೆ ಇಬ್ಬರು ಸಹೋದರರಿಗೆ ಮಾಹಿತಿ ತಿಳಿದು ಲಪಾಯಿಸಲು ಪ್ಲಾನ್ ಮಾಡಿದ್ದಾರೆ.ನಗದು ದೋಚುವ ಉದ್ದೇಶದಿಂದ ಇಬ್ಬರೂ ಸೇರಿ ಝಾಕಿರ್ ತಲೆಗೆ ಕಬ್ಬಿಣದ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದರು. ಬಳಿಕ ಮನೆಯಲ್ಲಿಟ್ಟಿದ್ದ ನಗದು ಹಾಗೂ ಚಿನ್ನಾಭರಣ ದೋಚಿ ಶವವನ್ನು ಫ್ರಿಡ್ಜ್ ನಲ್ಲಿಟ್ಟು ಪರಾರಿಯಾಗಿದ್ದಾರೆ. ಆರೋಪಿಗಳ ಬಳಿಯಿಂದ 4 ಲಕ್ಷ ರೂಪಾಯಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.