Sunday, January 16, 2022
spot_imgspot_img
spot_imgspot_img

ಹಣದಾಸೆಗೆ ಗಾಂಜಾ ಮಾರಾಟ; 19 ವರ್ಷದ ಯುವಕನ ಬಂಧನ

- Advertisement -
- Advertisement -

ನೆಲಮಂಗಲ: ಸಣ್ಣ ವಯಸ್ಸಿನಲ್ಲಿ ಯುವಕರ ಕೈಗೆ ಮಾದಕ ವಸ್ತುಗಳು ಸಿಗುತ್ತಿದ್ದು, 19 ವರ್ಷದ ಯುವಕನೊಬ್ಬ ಹಣದಾಸೆಗೆ ಗಾಂಜಾ ಮಾರಾಟ ಮಾಡುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಬಂಧಿತ ಆರೋಪಿಯನ್ನು ಬೆಂಗಳೂರು ಉತ್ತರ ತಾಲೂಕಿನ ಕಡಬಗೆರೆ ಬಳಿಯ ಜನಪ್ರಿಯ ನಿವಾಸಿ ಹರಿ ಗೋವಿಂದರಾಜು(19) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ತಿಳಿದು ಪೊಲೀಸರು ದಾಳಿ ಮಾಡಿದ್ದು, ಬೆಂಗಳೂರು ಹೊರವಲಯ ನೆಲಮಂಗಲದ ಇಂದಿರಾನಗರದಲ್ಲಿ ಯುವಕನನ್ನು ಬಂಧಿಸಿದಿದ್ದಾರೆ. ಬರೋಬ್ಬರಿ 600 ಗ್ರಾಂ. ಗಾಂಜಾ ವಶಪಡಿಸಿಕೊಂಡಿದ್ದಾರೆ.

ನೆಲಮಂಗಲ ಟೌನ್ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ, ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ, ಆರೋಪಿಯನ್ನು ನ್ಯಾಯಾಲಯದ ವಶಕ್ಕೆ ನೀಡಿದ್ದಾರೆ. ಹೆಚ್ಚಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

driving
- Advertisement -

Related news

error: Content is protected !!