
ಬಿ.ಸಿ.ರೋಡಿನ ಹೃದಯ ಭಾಗದಲ್ಲಿರುವ ಭಾರತ್ ಬಿಲ್ಡಿಂಗ್ ನ ನೆಲಮಹಡಿಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಕೆಲತಿಂಗಳ ಹಿಂದೆ ಪೊಲೀಸ್ ದಾಳಿಯಾಗಿತ್ತು. ಆ ಸಂದರ್ಭ ಅಡ್ಡೆಯ ಕಿಂಗ್ ಪಿನ್ ಕದ್ಕಾರ್ ಕರೀಂ ಪರಾರಿಯಾಗಿದ್ದು, ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದಕ್ಕೂ ಮುಂಚೆ ಎರಡು ವರ್ಷಗಳ ಹಿಂದೆ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ನಾರ್ಶ ಖಂಡಿಗದಲ್ಲಿ ಕೂಲಿ ಕಾರ್ಮಿಕನ ಮೇಲೆ ಡೀಸಿಲ್ ಸುರಿದು ಬೆಂಕಿ ಹಚ್ಚಲು ಮುಂದಾಗುವ ಮೂಲಕ ಕೊಲೆಗೆ ಯತ್ನಿಸಲಾದ ಪ್ರಕರಣದಲ್ಲಿ ಇದೇ ಕದ್ಕಾರ್ ಕರೀಂ ಆರೋಪಿಯಾಗಿದ್ದ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಪೊಲೀಸರು ಈತನನ್ನು ಬಂಧಿಸಿ ಜೈಲಿಗಟ್ಟಿದ್ದರು.

ನಾಲ್ಕು ವರ್ಷಗಳ ಹಿಂದೆ ಬೋಳಂತೂರಿನಲ್ಲಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಸಮಾಜಘಾತುಕರ ವಿರುದ್ಧ ಬ್ರಹತ್ ಪ್ರತಿಭಟನೆ ನಡೆದಿತ್ತು. ಈ ಸಂದರ್ಭ ಇದೇ ಕರೀಂ ವಿರುದ್ಧ ಗಾಂಜಾ ಸರಬರಾಜು ಮಾಡುತ್ತಿದ್ದಾನೆಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಶೋಕಿವಾಲನಾಗಿರುವ ಈತ ಕೆಲಸ ಕೊಡಿಸುವ ಭರವಸೆ, ಜಮೀನು ದಾಖಲೆ ಮಾಡಿಸಿಕೊಡುವ ಭರವಸೆಗಳನ್ನು ನೀಡಿ ಹಣ ಸುಲಿಗೆ ಮಾಡುವ ಮೂಲಕ ಅಮಾಯಕರನ್ನು ವಂಚಿಸುತ್ತಿರುವ ಬಗ್ಗೆಯೂ ಸಾಕಷ್ಟು ದೂರುಗಳು ಬಂದಿವೆ. ಪೊಲೀಸ್ ಇಲಾಖೆಯ ಕೆಲವೊಂದು ಸಿಬ್ಬಂದಿಗಳಿಗೆ ಬೇಕು ಬೇಡಗಳನ್ನು ಪೂರೈಸುತ್ತಿರುವ ಮೂಲಕ ಇಲಾಖೆಯ ಮೇಲೆ ಕಳ್ಳಕಿವಿ ಇರಿಸಿಕೊಂಡಿದ್ದಾನೆಂಬ ಬಲವಾದ ಆರೋಪಗಳೂ ಈತನ ಮೇಲಿವೆ.
ಕಂದಾಯ ಮತ್ತು ಪೊಲೀಸ್ ಇಲಾಖೆಯನ್ನೇ ಹೈಜಾಕ್ ಮಾಡುವುದನ್ನೇ ಬಂಡವಾಳ ಮಾಡಿಕೊಂಡಿರುವ ಈತ ಅಧಿಕಾರಿಗಳೊಂದಿಗೆ ನಿಂತು ಫೊಟೋ ತೆಗಿಸಿ ಜನಸಾಮಾನ್ಯರನ್ನು ಬಕ್ರ ಮಾಡುತ್ತಿದ್ದಾನೆಂಬ ನೇರ ಆರೋಪ ಸಾರ್ವಜನಿಕರದ್ದಾಗಿದೆ. ಇದೀಗ ಸ್ವತಃ ಜಿಲ್ಲಾಧಿಕಾರಿಯವರೇ ಕಾರ್ಯಕ್ರಮವೊಂದರಲ್ಲಿ ಗೌರವಿಸುವ ಮೂಲಕ ಸಾರ್ಜನಿಕ ವಲಯದಲ್ಲಿ ನಗೆಪಾಟಲಿಗೀಡಾಗಿದ್ದಾರೆ. ಇನ್ನಾದರೂ ಸನ್ಮಾನ, ಗೌರವ, ಸ್ಮರಣಿಕೆ ನೀಡುವ ಮೊದಲು ಅತಿಥಿಗಳು, ಗಣ್ಯರು ಮತ್ತು ಕಾರ್ಯಕ್ರಮ ಸಂಘಟಕರು ಗೌರವ ಸ್ವೀಕರಿಸುವ ವ್ಯಕ್ತಿಗಳ ಪೂರ್ವಾಪರ ಅರಿತುಕೊಳ್ಳುವ ಮೂಲಕ ಮಾನ ಕಾಪಾಡಬೇಕಿದೆಯಲ್ಲವೇ.?


