Sunday, June 29, 2025
spot_imgspot_img
spot_imgspot_img

ಹಿಂದೂಗಳು ಒಬ್ಬರನ್ನು ಮದುವೆಯಾಗುತ್ತಾರೆ, ಮೂವರು ಪ್ರೇಯಸಿಯರನ್ನು ಇಟ್ಟುಕೊಂಡಿರುತ್ತಾರೆ; ಹಿಂದೂ ವಿವಾಹ ಪದ್ಧತಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಶೌಕತ್ ಅಲಿ ವಿರುದ್ದ ಕೇಸು ದಾಖಲು

- Advertisement -
- Advertisement -

ಲಕ್ನೋ: ಹಿಂದೂ ವಿವಾಹ ಪದ್ಧತಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ AIMIM ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಶೌಕತ್ ಅಲಿರವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

“ನಾವು ಇಬ್ಬರನ್ನು ಮದುವೆಯಾಗುತ್ತೇವೆ. ಇಬ್ಬರಿಗೂ ಸಮಾನ ಗೌರವ ನೀಡುತ್ತೇವೆ. ಇಬ್ಬರ ಜೊತೆಗೆ ಬಾಳುತ್ತೇವೆ. ಆದರೆ ಹಿಂದೂಗಳು ಒಬ್ಬರನ್ನು ಮದುವೆಯಾಗುತ್ತಾರೆ. ಮೂವರು ಪ್ರೇಯಸಿಯರನ್ನು ಇಟ್ಟುಕೊಂಡಿರುತ್ತಾರೆ. ಹೆಂಡತಿಗೂ ಗೌರವ ಕೊಡುವುದಿಲ್ಲ. ಪ್ರೇಯಸಿರಿಗೂ ಗೌರವ ಕೊಡುವುದಿಲ್ಲ. ನಮ್ಮ ಇಬ್ಬರು ಹೆಂಡತಿಯರ ಮಕ್ಕಳ ಹೆಸರು ರೇಷನ್ ಕಾರ್ಡ್‌ನಲ್ಲಿ ದಾಖಲಾಗಿರುತ್ತದೆ ಎಂದು ಶೌಕತ್ ಅಲಿ ಹೇಳಿದ್ದಾರೆ. ಇದೇ ವೇಳೆ ಈ ದೇಶ ಹಿಂದುತ್ವ ನಿರ್ಧರಿಸುವುದಲ್ಲ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಬಿಜೆಪಿಯಿಂದ ಭಾರತ ಹಾಳಾಗುತ್ತಿದೆ ಎಂದು ಶೌಕತ್ ಆಲಿ ಹೇಳಿದ್ದರು.

ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂಥ ಹೇಳಿಕೆ ನೀಡುವ ಮೂಲಕ ಕೋಮು ಸಾಮರಸ್ಯಕ್ಕೆ ಧಕ್ಕೆ ತಂದಿರುವ ಆರೋಪದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!