Saturday, May 4, 2024
spot_imgspot_img
spot_imgspot_img

ಅಂಗಡಿಯಿಂದ ಆಹಾರ ಪದಾರ್ಥಗಳನ್ನು ಕಳ್ಳತನ ಮಾಡಿದ್ದಾನೆಂದು ಆರೋಪಿಸಿ ವ್ಯಕ್ತಿಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಮಂದಿಗೆ ನ್ಯಾಯಲಯ ಜೈಲುಶಿಕ್ಷೆ ಪ್ರಕಟ

- Advertisement -G L Acharya panikkar
- Advertisement -

ವ್ಯಕ್ತಿಯೊಬ್ಬ ಅಂಗಡಿಯಿಂದ ಆಹಾರ ಪದಾರ್ಥಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಥಳಿಸಿ, ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು 13 ಮಂದಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಘಟನೆ ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಅಗಳಿ ಅಟ್ಟಪ್ಪಡಿಯ ಎಂಬಲ್ಲಿ ನಡೆದಿದೆ.


ಅಟ್ಟಪ್ಪಡಿಯ ಬುಡಕಟ್ಟು ಸಮುದಾಯಕ್ಕೆ ಸೇರಿದ ನಿವಾಸಿ ಮಧು ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಗುಂಪೊಂದು ಥಳಿಸಿ ಐದು ವರ್ಷಗಳ ತನಿಖೆಯ ಬಳಿಕ ತೀರ್ಪು ನೀಡಿದ್ದ ನ್ಯಾಯಾಧೀಶ ಕೆ.ಎಂ. ರತೀಶ್‌ ಕುಮಾರ್‌ 13 ಜನರು ಅಪರಾಧಿಗಳು ಎಂದು ಶಿಕ್ಷೆಯನ್ನು ಘೋಷಿಸಿದರು.


ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಶಿಕ್ಷೆಯ ಪ್ರಮಾಣದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ವಕೀಲ
ರಾಜೇಶ್‌ ಎಂ.ಮೆನನ್ ಮಾತನಾಡಿ ಶಿಕ್ಷೆಯ ಪ್ರಮಾಣ 7 ವರ್ಷ ಆಗಿರುವುದಕ್ಕೆ ಬೇಸರವಿದೆ ಹಾಗೂ ಅಪರಾಧಿಗಳು ಜೀವಾವಧಿ ಶಿಕ್ಷೆಗೆ ಅರ್ಹರಾಗಿದ್ದಾರೆ. ರಾಜ್ಯ ಸರ್ಕಾರ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ವಿಶ್ವಾಸ ಇದೆ ಎಂದು ತಿಳಿಸಿದರು.

- Advertisement -

Related news

error: Content is protected !!