Tuesday, July 8, 2025
spot_imgspot_img
spot_imgspot_img

ಅಕ್ರಮ ಹಣ ವರ್ಗಾವಣೆ ಪ್ರಕರಣ; ಸಂಜಯ್ ರಾವತ್‌ಗೆ ಸೆ. 19ರವರೆಗೆ ಜೈಲು

- Advertisement -
- Advertisement -

ಮುಂಬೈ: ಪತ್ರಾ ಚಾಲ್ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ನಾಯಕ ಸಂಜಯ್ ರಾವುತ್ ಅವರ ನ್ಯಾಯಾಂಗ ಬಂಧನವನ್ನು ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 19 ರವರೆಗೆ ವಿಸ್ತರಿಸಿದೆ.

ಸಂಜಯ್ ರಾವುತ್ ಅವರು ಇನ್ನೂ ಜಾಮೀನು ಅರ್ಜಿ ಸಲ್ಲಿಸಿಲ್ಲ ಎಂದು ಅವರ ಪರ ವಕೀಲರು ಸೋಮವಾರ ನ್ಯಾಯಾಲಯಕ್ಕೆ ತಿಳಿಸಿದರು.

ಇನ್ನು ರಾವುತ್ ಅವರ ಕುಟುಂಬ ಇಂದು ನ್ಯಾಯಾಲಯಕ್ಕೆ ಹಾಜರಾಗಿತ್ತು. ಅವರ ಅನೇಕ ಬೆಂಬಲಿಗರೂ ನ್ಯಾಯಾಲಯದ ಮೆಟ್ಟಿಲೇರಿದ್ದರು.

1,034 ಕೋಟಿ ರೂಪಾಯಿ ಪತ್ರಾ ಚಾಲ್ ಭೂ ಹಗರಣ ಪ್ರಕರಣದಲ್ಲಿ ರಾವುತ್ ಅವರನ್ನು ಆಗಸ್ಟ್ 1 ರಂದು ಇ.ಡಿ ಬಂಧಿಸಿತ್ತು.

- Advertisement -

Related news

error: Content is protected !!