Tuesday, July 1, 2025
spot_imgspot_img
spot_imgspot_img

ಅತ್ತೆಯನ್ನು ಸ್ಕ್ರೂ ಡ್ರೈವರ್ ನಿಂದ ಇರಿದು ಕೊಂದು, ಬೆಂಕಿ ಹಚ್ಚಿದ ಸೊಸೆ

- Advertisement -
- Advertisement -
suvarna gold
vtv vitla
vtv vitla

ಚೆನ್ನೈ: ಅತ್ತೆಯನ್ನು ಸ್ಕ್ರ್ಯೂಡ್ರೈವರ್ ನಿಂದ ಇರಿದು ಕೊಂದು ನಂತರ ಮೃತ ದೇಹಕ್ಕೆ ಬೆಂಕಿ ಹಚ್ಚಿ,ಬೆಂಕಿ ದುರಂತದಿಂದ ಅತ್ತೆ ಸಾವನ್ನಪ್ಪಿದ್ದಾರೆ ಎಂಬಂತೆ ಬಿಂಬಿಸಲು ಪ್ರಯತ್ನಿಸಿದ ಸೊಸೆ ಬಳಿಕ ಪೊಲೀಸ್ ಅತಿಥಿಯಾದ ಘಟನೆ ತಮಿಳುನಾಡಿನ ವಿಶ್ವಾಸ್ ನಗರದಲ್ಲಿ ನಡೆದಿದೆ.

ನವೀನಾ ಮೃತ ಅತ್ತೆ. ಸೊಸೆ ರೇಷ್ಮಾ ಅತ್ತೆಯನ್ನು ಕೊಂದ ಆರೋಪಿಯಾಗಿದ್ದಾಳೆ.

ನವೀನಾ ತಾಯಿ ಎಸ್.ಶಕಿಂಶಾ, ಮಗಳ ಸಾವಿನ ಬಗ್ಗೆ ಸಂಶಯಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ದುರಿನಲ್ಲಿ ತನ್ನ ಮಗಳು ಬೆಂಕಿಯಿಂದ ಸುಟ್ಟ ಗಾಯದಿಂದ ಸತ್ತಿದ್ದಾಳೆ. ಆದರೆ ಆಕೆಯ ತಲೆ ಮೇಲೆ ಗಾಯವಾಗಿದೆ.ನನ್ನ ಮಗಳಿಗೆ ಹೀಗೆ ಆಗುವಾಗ ಆಕೆಯ ಸೊಸೆ ರೇಷ್ಮಾ ಮತ್ತು ಅವಳ 2ವರ್ಷದ ಮಗ ಅಲ್ಲಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ಸೊಸೆ ರೇಷ್ಮಾಳನ್ನು ವಿಚಾರಣೆಗೆ ಒಳಪಡಿಸಿದಾಗ, ನವೀನಾ ಮೊದಲು ಅಡುಗೆ ಮನೆಯಲ್ಲಿ ನೆಲದ ಮೇಲೆ ಬಿದ್ದರು. ನಂತರ ತನ್ನನ್ನು ಎತ್ತುವಂತೆ ನನ್ನ ಬಳಿ ಕೇಳಿದಳು. ಆದರೆ ಸ್ವಲ್ಪ ತಡವಾಗುತ್ತಿದ್ದಂತೆ ನನ್ನನ್ನು ನಿಂದಿಸಲು ಪ್ರಯತ್ನ ಪಟ್ಟಳು.ಆಗ ನನಗೆ ಕೋಪ ಬಂದು, ಅಲ್ಲಿಯೇ ಇದ್ದ ಸ್ಕ್ರ್ಯೂಡ್ರೈವರ್ನಿಂದ ಹಲವು ಬಾರಿ ಇರಿದು, ಹೊಡೆದು ಕೊಂದೆ. ನಂತರ ಅದನ್ನು ಬೆಂಕಿ ಅನಾಹುತವೆಂದು ಬಿಂಬಿಸಲು ಯತ್ನಿಸಿದೆ ಎಂದು ಒಪ್ಪಿಕೊಂಡಿದ್ದಾಳೆ.

vtv vitla
vtv vitla
- Advertisement -

Related news

error: Content is protected !!