Monday, April 29, 2024
spot_imgspot_img
spot_imgspot_img

ಅತ್ಯಾಚಾರಿ ನಿರೋಧ್ (ಕಾಂಡೋಮ್) ಬಳಸಿದ್ದ ಕಾರಣ ಜಾಮೀನು ಕೊಟ್ಟ ಹೈಕೋರ್ಟ್..!!

- Advertisement -G L Acharya panikkar
- Advertisement -

ಅಪ್ರಾಪ್ತೆಯ ಅತ್ಯಾಚಾರ ಎಸಗಿದ್ದ ಆರೋಪಿಯೊಬ್ಬನಿಗೆ ಕಾಂಡೋಮ್ ಬಳಸಿದ್ದಾನೆ ಹಾಗೂ ಕೃತ್ಯದ ಪರಿಣಾಮ ಆಕೆಗೆ ಅರಿವಿತ್ತು ಎಂಬ ಅಂಶಗಳನ್ನು ಗುರುತಿಸಿ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ನಿರೋಧ್

2019ರ ಸೆಪ್ಟೆಂಬರ್ 9 ರಂದು ಕೊಲ್ಲಾಪುರ ಪೊಲೀಸರು ಬಂಧನದಲ್ಲಿರಿಸಿದ್ದ ಆರೋಪಿಯ ಜಾಮೀನು ಅರ್ಜಿಯನ್ನು ಏಕ-ನ್ಯಾಯಾಧೀಶ ಪೀಠದ ಸಿ.ವಿ.ಭದಂಗ್ ವಿಚಾರಣೆ ನಡೆಸಿ, ಜಾಮೀನು ನೀಡಲು ಮುಂದಾಗಿದ್ದಾರೆ. ಆರೋಪಿಯು 2 ವರ್ಷಕ್ಕಿಂತ ಹೆಚ್ಚು ಕಾಲ ಪೊಲೀಸ್ ಬಂಧನದಲ್ಲಿದ್ದಾನೆ ಎಂಬುದನ್ನು ಪರಿಗಣಿಸಿ 25,000 ರೂ. ಶ್ಯೂರಿಟಿಯೊಂದಿಗೆ ಜಾಮೀನು ನೀಡಲಾಗಿದೆ.

ಸಂತ್ರಸ್ತೆಗೆ 16 ವರ್ಷ 6 ತಿಂಗಳ ವಯಸ್ಸಾಗಿದ್ದರಿಂದ ಮತ್ತು ಆಕೆಗೆ ಕ್ರಿಯೆಯ ಪರಿಣಾಮಗಳ ಬಗ್ಗೆ ಅರಿವಿದೆ ಎಂದು ಗಮನಿಸುವುದು ಅವಶ್ಯವಾಗಿದೆ. ಇದರಲ್ಲಿ ಯಾವುದೇ ಬಲವಂತದ ಅಂಶಗಳಿಲ್ಲ ಎಂದು ಸೂಚಿಸುವ ಸಂದರ್ಭಗಳಿವೆ. ಅಲ್ಲದೆ ವೈದ್ಯಕೀಯ ವರದಿಯ 15 (F)ರ ಪ್ರಕಾರ ಅರ್ಜಿದಾರರು ಸಂಭೋಗದ ವೇಳೆ ರಕ್ಷಣೆ (ಕಾಂಡೋಮ್) ಸಹ ಬಳಸಿದ್ದಾರೆಂಬುದನ್ನು ಎಂಬ ಅಂಶಗಳನ್ನು ನ್ಯಾಯಾಲಯ ಗುರುತಿಸಿದೆ. ಸಂತ್ರಸ್ತೆ ಪರ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಎ.ಆರ್.ಕಪಾಡ್ನಿಸ್ ಪ್ರಕಾರ, ಸಂತ್ರಸ್ತೆಯ ತಂದೆ ಎಫ್‌ಐಆರ್ ದಾಖಲಿಸಿದಾಗ ಆಕೆಗೆ 16 ವರ್ಷ 6 ತಿಂಗಳ ವಯಸ್ಸು. ಆರೋಪಿಯು ಆಕೆಗೆ ಮುಂಚೆಯೇ ಪರಿಚಯವಿದ್ದರಿಂದ 2019ರ ಮೇ ತಿಂಗಳಲ್ಲಿ ಹುಡುಗಿಯನ್ನು ತನ್ನ ಮನೆಯ ಹಿಂದೆ ಕರೆದೊಯ್ದಿದ್ದಾನೆ. ಆಕೆಯನ್ನು ಪ್ರೀತಿಸಿ ಮದುವೆಯಾಗುವುದಾಗಿ ಹೇಳ ಬಲವಂತವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ವಾದಿಸಿದ್ದರು. ಆಕೆಯನ್ನು ಪೋಕ್ಸೊ ಕಾಯ್ದೆ ಅಡಿಯಲ್ಲಿ ಅಪ್ರಾಪ್ತೆ ಎಂದೂ ಉಲ್ಲೇಖಿಸಿದ್ದರು.

ಇದು ಕೆಲವು ತಿಂಗಳ ಕಾಲ ಮುಂದುವರಿಯಿತು. ಅಂತಿಮವಾಗಿ ಸಂತ್ರಸ್ತೆಯ ತಂದೆ ಸಂಬಂಧದ ಬಗ್ಗೆ ತಿಳಿದುಕೊಂಡು ಆರೋಪಿಯ ವಿರುದ್ಧ FIR ದಾಖಲಿಸಿದರು. ಆರೋಪಿ ಪರ ವಾದ ಮಂಡಿಸಿದ ವಕೀಲ ಪರಸ್ ಯಾದವ್, ಸಂತ್ರಸ್ತೆ ಅಪ್ರಾಪ್ತ ವಯಸ್ಸಿನವಳಾಗಿದ್ದರೂ ಆಕೆಗೆ ವಯಸ್ಸಾಗಿರುವುದರಿಂದ ಕೃತ್ಯದ ಸ್ವರೂಪ ಮತ್ತು ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾಳೆ. ಈ ಸಂಬಂಧವು ಒಮ್ಮತದಿಂದ ಕೂಡಿದೆ ಎಂದು ಸೂಚಿಸುತ್ತದೆ ಎಂದಿದ್ದಾರೆ.

- Advertisement -

Related news

error: Content is protected !!