- Advertisement -
- Advertisement -

ಕೇರಳದ ಪ್ರಸಿದ್ಧ ನಿರ್ದೇಶಕ ಲಿಜು ಕೃಷ್ಣ ಅವರನ್ನು ಕೇರಳದ ಪೊಲೀಸರು ಮಾರ್ಚ್ 6 ರಂದು ಅತ್ಯಾಚಾರ ಆರೋಪದಲ್ಲಿ ಕೇರಳದ ಕಣ್ಣೂರಿನಲ್ಲಿ ಬಂಧಿಸಿದ್ದಾರೆ.
ನಿರ್ದೇಶಕ ಲಿಜು ಕೃಷ್ಣ ಅವರ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರದ ಬಗ್ಗೆ ದೂರು ನೀಡಿದ್ದು, ಅದರ ಅನ್ವಯ ಐಪಿಸಿ ಸೆಕ್ಷನ್ 376 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವ ಪ್ರಕಾರ ಸಂತ್ರಸ್ತ ದೂರುದಾರರು ಚಿತ್ರರಂಗದವರಲ್ಲ. ಆದರೆ ಲಿಜು ಕೃಷ್ಣ ಅವರಿಗೆ ತುಂಬಾ ಪರಿಚಿತರು’ ಎಂದು ಹೇಳಿದ್ದಾರೆ.

ಇನ್ನು ಕೃಷ್ಣ ಅವರನ್ನು ಬಂಧಿಸಿರುವ ಪೊಲೀಸರು ಇಂದು ಕೊಚ್ಚಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.
ಪಡವೆಟ್ಟು ಲಿಜು ಕೃಷ್ಣ ಅವರ ಚೊಚ್ಚಲ ಚಿತ್ರವಾಗಿದೆ. ಪಡವೆಟ್ಟು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮಲಯಾಳಂ ಕಲಾವಿದರಾದ ಮಂಜು ವಾರಿಯರ್ ಮತ್ತು ನಿವಿನ್ ಪೌಲಿ ಪ್ರಮುಖ ಪಾತ್ರದಲ್ಲಿ ನಡೆಸುತ್ತಿದ್ದಾರೆ.



- Advertisement -