Friday, May 17, 2024
spot_imgspot_img
spot_imgspot_img

ಅಧಿಕ ಕೊಲೆಸ್ಟ್ರಾಲ್​ ಮಟ್ಟವನ್ನು ಸುಧಾರಿಸಲು ಇಲ್ಲಿವೆ ಸರಳ ಸಲಹೆಗಳು

- Advertisement -G L Acharya panikkar
- Advertisement -

ರಕ್ತದಲ್ಲಿನ ಅಧಿಕ ಕೊಲೆಸ್ಟ್ರಾಲ್‌ ಮಟ್ಟವನ್ನು ಹೈಪರ್ಕೊಲೆಸ್ಟರಾಲ್ಮಿಯಾ ಎಂದು ಕರೆಯಲಾಗುತ್ತದೆ. ರಕ್ತದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾದರೆ ಹಲವು ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ದೇಹದಲ್ಲಿ ಲಿಪಿಡ್​ ಅಂಶಗಳನ್ನು ನಿಯಂತ್ರಿಸುವುದು ಅಗತ್ಯವಾಗಿದೆ. ರಕ್ತದಲ್ಲಿನ ಅಧಿಕ ಕೊಲೆಸ್ಟ್ರಾಲ್​ ಮಟ್ಟದಿಂದ ಹೃದಯರಕ್ತನಾಳದ ಕಾಯಿಲೆಗಳು, ಸೆರೆಬ್ರೊವಾಸ್ಕುಲರ್ ಕಾಯಿಲೆ ಸೇರಿದಂತೆ ಹಲವು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಕೊಲೆಸ್ಟ್ರಾಲ್​ ಮಟ್ಟವನ್ನು ನಿಯಂತ್ರಿಸಲು ಈ ಕ್ರಮಗಳನ್ನು ಕೈಗೊಳ್ಳಿ.

ಹೃದಯದ ಆರೋಗ್ಯ ಕಾಪಾಡಿಕೊಳ್ಳಿ:
ಕೊಲೆಸ್ಟ್ರಾಲ್​ ಮಟ್ಟದಿಂದ ಹೃದಯಕ್ಕೆ ಹೆಚ್ಚು ಅಪಾಯ. ಹೀಗಾಗಿ ಹೃದಯದ ಆರೋಗ್ಯೆದೆಡೆಗೆ ಹೆಚ್ಚುಯ ಗಮನ ನೀಡಿ. ಹೆಚ್ಚು ನ್ಯೂಟ್ರಿಷಿಯನ್​ ಇರುವ ಆಹಾರಗಳನ್ನು ಸೇವಿಸಿ. ಆದರೆ ನೆನಪಿಡಿ ರೆಡ್​ ಮೀಟ್​ನಂತಹ ಹೆಚ್ಚು ಕೊಬ್ಬಿನ ಆಹಾರಗಳ ಸೇವನೆ ಬೇಡ.

ವ್ಯಾಯಾಮ /ವಾಕಿಂಗ್​:
ದೇಹವನ್ನು ಚಟುವಟಿಕೆಯಿಂದಿರುವಂತೆ ಇಟ್ಟುಕೊಳ್ಳಿ. ವ್ಯಾಯಾಮ, ವಾಕಿಂಗ್​ನಂತಹ ಅಭ್ಯಾಸ ರೂಢಿಸಿಕೊಳ್ಳಿ. ಅದಕ್ಕಾಗಿ ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಿ. ಪ್ರತಿದಿನದ ನಿಮ್ಮ ಅಭ್ಯಾಸ ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಅಭ್ಯಾಸವನ್ನು ರೂಢಿಸಿಕೊಳ್ಳುವ ಮೊದಲು ಸರಿಯಾದ ಕ್ರಮ ಆಯ್ಕೆಮಾಡಿಕೊಳ್ಳಿ.

ಧೂಮಪಾನ ತ್ಯಜಿಸಿ:
ಧೂಮಪಾನದಿಂದ ಆರೋಗ್ಯಕ್ಕೆ ಕೆಡುಕು ಎನ್ನುವುದು ತಿಳಿದ ವಿಷಯ. ಚರ್ಮ, ಉಸಿರಾಟ ಎಲ್ಲದಕ್ಕೂ ಧೂಮಪಾನ ತೊಂದರೆ ನೀಡುತ್ತದೆ. ಅದೇ ರೀತಿ ಹೈಪರ್ಕೊಲೆಸ್ಟರಾಲ್ಮಿಯಾ ಉಂಟಾಗಲು ಕೂಡ ಧೂಮಪಾನ ಕಾರಣವಾಗುತ್ತದೆ. ಹೃದಯ, ಶ್ವಾಸಕೋಶ ಎಲ್ಲದಕ್ಕೂ ಅಪಾಯತಂದೊಡ್ಡುವ ಧೂಮಪಾನ ತ್ಯಜಿಸಿದರೆ ಮಾತ್ರ ಆರೋಗ್ಯವಾಗಿರಲು ಸಾಧ್ಯ.

vtv vitla
vtv vitla

ದೇಹದ ತೂಕ:
ಹೆಚ್ಚಿನ ದೇಹದ ತೂಕ ಕೂಡ ಹೈಪರ್ಕೊಲೆಸ್ಟರಾಲ್ಮಿಯಾಗೆ ಕಾರಣವಾಗುತ್ತದೆ. ಜಂಕ್​ ಫುಡ್​ಗಳ ಸೇವನೆ, ತಡರಾತ್ರಿಯ ಊಟ, ಆಲ್ಕೋಹಾಲ್​ ಸೇವನೆಯಿಂದ ದೇಹದ ತೂಕ ಹೆಚ್ಚುತ್ತದೆ. ಇದರಿಂದ ಅನಾರೋಗ್ಯಕರ ಲಿಪಿಡ್​ಗಳು ಉತ್ಪತ್ತಿಯಾಗುತ್ತವೆ. ಕೊಲೆಸ್ಟ್ರಾಲ್​ ಮಟ್ಟ ಏರಿಕೆಯಾಗುತ್ತದೆ.

ವೈದ್ಯರನ್ನು ಸಂಪರ್ಕಿಸಿ:
ಆಗಾಗ ದೇಹವನ್ನು ತಪಾಸಣೆಗೆ ಒಳಪಡಿಸಿಕೊಳ್ಳಿ. ಆಗ ಮಾತ್ರ ನಿಮ್ಮ ಆರೋಗ್ಯದ ಸ್ಥಿತಿ ತಿಳಿಯುತ್ತದೆ. ಒಂದೇ ವೈದ್ಯರನ್ನು ಖಚಿಪಡಿಸಿಕೊಂಡು ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ. ಕೆಲವೊಮ್ಮೆ ಜೀವನಶೈಲಿ ಮತ್ತು ಆಹಾರಶೈಲಿಯನ್ನು ನಿಯಂತ್ರಿಸಿದರೆ ಕೊಲೆಸ್ಟ್ರಾಲ್​ ಮಟ್ಟವನ್ನು ನಿಯಂತ್ರಿಸಬಹುದು. ಇದಕ್ಕಾಗಿ ವೈದ್ಯರ ಸಲಹೆ ಪಡೆದುಕೊಳ್ಳಿ.

vtv vitla
vtv vitla
- Advertisement -

Related news

error: Content is protected !!