Thursday, May 9, 2024
spot_imgspot_img
spot_imgspot_img

ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆ; ಚುಕ್ಕಿ ಜಿಂಕೆಯ ಜೊತೆ ಶ್ವೇತವರ್ಣದ ಜಿಂಕೆ ಪತ್ತೆ..!!

- Advertisement -G L Acharya panikkar
- Advertisement -

ಸಾಮಾನ್ಯವಾಗಿ ಕಾಣ ಸಿಗುವ ಚುಕ್ಕಿ ಜಿಂಕೆಯ ಜೊತೆ ಇಲ್ಲೊಂದು ಕಡೆ ಬಿಳಿ ಜಿಂಕೆಯೊಂದು ಪತ್ತೆಯಾಗಿದೆ. ಉತ್ತರಪ್ರದೇಶದ ಕತರ್ನಿಯಾ ಘಾಟ್‌ ವನ್ಯಜೀವಿ ಅಭಯಾರಣ್ಯದಲ್ಲಿ ಅಪರೂಪದ ದೃಶ್ಯ ಕಂಡು ಬಂದಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಆಕಾಶ್ ದೀಪ್ ಬಧವಾನ್ ಎಂಬುವವರು ಈ ಅಪರೂಪದ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಬಿಳಿ ಬಣ್ಣದ ಜಿಂಕೆಗೆ ಅಲ್ಬಿನೋ ಜಿಂಕೆ ಎಂದು ಕರೆಯಲಾಗುತ್ತದೆ. ಫೋಟೋದಲ್ಲಿ ಹುಲ್ಲಿನ ಮಧ್ಯೆ ಚುಕ್ಕಿ ಜಿಂಕೆ ಜೊತೆಗೆ ಈ ಬಿಳಿ ಬಣ್ಣದ ಜಿಂಕೆ ಓಡಾಡುತ್ತಿರುವುದು ಕಾಣಿಸಿದೆ.

ಈ ಅಪರೂಪದ ಫೋಟೋಗೆ ಹಲವು ಬಳಕೆದಾರರ ಜೊತೆ ದೇಶದ ಹಲವು ಐಎಫ್‌ಎಸ್ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್‌ ಈ ಫೋಟೋಗೆ ಪ್ರತಿಕ್ರಿಯಿಸಿ, ಅಪರೂಪದವುಗಳನ್ನು ಪ್ರಕೃತಿಯಿಂದ ಬೇಗ ತೆಗೆದು ಹಾಕಲಾಗುತ್ತದೆ., ಈ ಪ್ರಕೃತಿಗೆ ಅವುಗಳು ಹೊಂದಿಕೊಳ್ಳುವುದು ಕಷ್ಟ ಎಂದು ಬರೆದುಕೊಂಡಿದ್ದಾರೆ. ಹಾಗೆಯೇ ಮತ್ತೊಬ್ಬ ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಪ್ರತಿಕ್ರಿಯಿಸಿ, ರಾಮಾಯಣದಲ್ಲಿ ಬಂಗಾರದ ಬಣ್ಣದ ಜಿಂಕೆಯ ಉಲ್ಲೇಖವಿರುವುದು ನಿಮಗೆ ಗೊತ್ತು. ಒಡಿಶಾ ಅಂಗುಲ್ ಜಿಲ್ಲೆಯಲ್ಲಿ 15 ವರ್ಷಗಳ ಹಿಂದೆ ಇದೇ ರೀತಿಯ ದೃಶ್ಯ ಕಂಡು ಬಂದಿತ್ತು. ಅಲ್ಲಿನ ಲಬಂಗಿ ಅತಿಥಿ ಗೃಹದಬಳಿ ಇದನ್ನು ನೋಡಿದ್ದೆ ಎಂದು ಕಾಮೆಂಟ್ ಮಾಡಿದ್ದಾರೆ.

ನ್ಯಾಷನಲ್ ಜಿಯಾಗ್ರಾಫಿಕ್ ಪ್ರಕಾರ, ಅಲ್ಬಿನೋ ಪ್ರಾಣಿಗಳಲ್ಲಿ ವರ್ಣದ್ರವ್ಯತೆಯೂ ಭಾಗಶಃ ಅಥವಾ ಸ್ವಲ್ಪವೂ ಇರುವುದಿಲ್ಲ. ಒಬ್ಬ ವ್ಯಕ್ತಿಯ ದೇಹದಲ್ಲಿ ಎರಡೂ ಪೋಷಕರಿಂದ ಮೆಲನಿನ್‌ ಉತ್ಪಾದನೆಗೆ ಅಡ್ಡಿಪಡಿಸುವ ಒಂದು ಅಥವಾ ಹೆಚ್ಚು ರೂಪಾಂತರಿತ ಜೀನ್‌ಗಳನ್ನು ಪಡೆದಾಗ ಆಲ್ಬಿನಿಸಂ ಸಂಭವಿಸುತ್ತದೆ. ಹಾಗೆಯೇ ಪ್ರಾಣಿಗಳಲ್ಲಿ ಈ ರೀತಿಯ ವರ್ಣ ಬದಲಾವಣೆಗೆ ಕಾರಣವಾಗಿದೆ.

ಅಲ್ಬಿನೋ ವನ್ಯಜೀವಿಗಳು ನಿಸರ್ಗದಲ್ಲಿ ಅಡೆತಡೆಗಳನ್ನು ತೊಂದರೆಗಳನ್ನು ಎದುರಿಸುತ್ತವೆ ಏಕೆಂದರೆ ಅವುಗಳು ಕಳಪೆ ದೃಷ್ಟಿಯನ್ನು ಹೊಂದಿರುತ್ತವೆ. ಸ್ಪಷ್ಟ ದೃಷ್ಟಿಯ ಕೊರತೆಯಿಂದಾಗಿ ಇತರ ಪರಭಕ್ಷಕ ಪ್ರಾಣಿಗಳಿಗೆ ಇವು ಸುಲಭವಾಗಿ ಆಹಾರವಾಗುತ್ತದೆ. ತಮಗೆ ಎದುರಾಗುವ ಅಪಾಯವನ್ನು ಗೃಹಿಸುವಲ್ಲಿ ಅವುಗಳು ವಿಫಲವಾಗುತ್ತವೆ. ಅಲ್ಲದೇ ಸಂಗಾತಿಯ ಹುಡುಕಾಟಕ್ಕೂ ಇವುಗಳ ಬಣ್ಣ ಇವುಗಳಿಗೆ ತೊಡಕಾಗುತ್ತದೆ. ಈ ಎಲ್ಲಾ ಅಸಮರ್ಥತೆ ಅವುಗಳನ್ನು ಪರಭಕ್ಷಕ ಪ್ರಾಣಿಗಳಿಗೆ ಆಹಾರವಾಗುವಂತೆ ಮಾಡುತ್ತವೆ.

- Advertisement -

Related news

error: Content is protected !!