Friday, May 3, 2024
spot_imgspot_img
spot_imgspot_img

ಅಪ್ರಾಪ್ತರನ್ನು ಬಳಸಿಕೊಂಡು ಬೈಕ್ ಕಳ್ಳತನಕ್ಕೆ ಇಳಿದ ಪೊಲೀಸ್ ಕಾನ್ಸ್ ಟೇಬಲ್ !!

- Advertisement -G L Acharya panikkar
- Advertisement -
vtv vitla
vtv vitla

ಬೆಂಗಳೂರು: ರಾಜಧಾನಿ ಬೆಂಗಳೂರು ಮಂದಿ ಬೆಚ್ಚಿಬೀಳುವಂತೆ ಭಾರೀ ವ್ಯವಸ್ಥಿತವಾಗಿ ದ್ವಿಚಕ್ರ ವಾಹನಗಳ ಕಳ್ಳತನ ಮಾಡ್ತಿದ್ದ ಗ್ಯಾಂಗ್ ಅಂದರ್ ಆಗಿದೆ. ಬೆಂಗಳೂರು ಸುತ್ತಮುತ್ತ ಬೈಕ್​ಗಳ ಕಳ್ಳತನಕ್ಕೆ ಕುಮ್ಮಕ್ಕು ನೀಡುತ್ತಿದ್ದ, ವಾಹನಗಳ್ಳರಿಗೆ ತನ್ನ ಮನೆಯಲ್ಲೇ ಆಶ್ರಯ ನೀಡುತ್ತಿದ್ದ, ಮನೆಯಲ್ಲೇ ಕದ್ದ ಬೈಕ್​ಗಳ ದಾಖಲೆ ತಯಾರು ಮಾಡ್ತಿದ್ದ ಐನಾತಿ ಪೊಲೀಸ್ ಕಾನ್ಸ್​​ಟೇಬಲ್​ನನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೈಕ್ ಕಳ್ಳತನ ಪ್ರಕರಣದಲ್ಲಿ ವಿದ್ಯಾರಣ್ಯಪುರ ಪೊಲೀಸ್ ಕಾನ್ಸ್​​ಟೇಬಲ್ ಹೊನ್ನಪ್ಪ A1 ಆರೋಪಿಯಾಗಿದ್ದಾರೆ. ಹೊನ್ನಪ್ಪನ ಜೊತೆಗೆ ರವಿ ಎಂಬುವವನೂ ಶಾಮೀಲಾಗಿದ್ದು, ಇನ್ನೂ ಇಬ್ಬರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾಗಡಿ‌ ರಸ್ತೆ ಪೊಲೀಸರು ಈ ಸಂಬಂಧ ಯಶಸ್ವೀ ಕಾರ್ಯಾಚರಣೆ ನಡೆಸಿದ್ದಾರೆ.

vtv vitla

ತನ್ನ ಮನೆಯಲ್ಲಿ ಹುಡುಗರಿಗೆ ಆಶ್ರಯ ನೀಡಿ, ಬೈಕ್​ಗಳ ಕಳ್ಳತನ ಮಾಡಿಸುತ್ತಿದ್ದ ಬಂಧಿತ ಪೊಲೀಸ್ ಕಾನ್ಸ್​​ಟೇಬಲ್ ಹೊನ್ನಪ್ಪ. ರಮೇಶ್ ಮತ್ತು ಇಬ್ಬರು ಅಪ್ರಾಪ್ತರ ತಂಡವು ಬೆಂಗಳೂರು ಸುತ್ತಮುತ್ತ ಬೈಕ್​ಗಳನ್ನು ಕದಿಯುತ್ತಿತ್ತು. ಇವರೆಲ್ಲರೂ ಕಾನ್ಸ್​​ಟೇಬಲ್ ಮನೆಯಲ್ಲೇ ಉಳಿದುಕೊಂಡು ಕುಕೃತ್ಯ ಎಸಗುತ್ತಿದ್ದರು.

Bangalore vidyaranyapura constable arrested in bike theft case along with team by magadi road police

ಇದಕ್ಕೆಲ್ಲ ಸಪೋರ್ಟ್ ಮಾಡ್ತಾ ಇದ್ದಿದ್ದೇ ಕಾನ್ಸ್​​ಟೇಬಲ್ ಹೊನ್ನಪ್ಪ. ಕದ್ದ ವಾಹನಗಳನ್ನು ಆಲ್ಟ್ರೇಶನ್ ಮಾಡಿಸಿ, ಮಾರಾಟ ಮಾಡ್ತಿದ್ದ ರಮೇಶ್. ಕದ್ದ ಬೈಕ್​ಗಳ ದಾಖಲೆಗಳನ್ನು ಕಾನ್ಸ್​​ಟೇಬಲ್ ಹೊನ್ನಪ್ಪನ ಮನೆಯಲ್ಲೇ ತಯಾರು ಮಾಡ್ತಿದ್ದರು. ಇದಕ್ಕಾಗಿ ಮನೆಯಲ್ಲಿ ಲ್ಯಾಪ್​ಟಾಪ್​ ಮತ್ತು ಪ್ರಿಂಟರ್ ಇಟ್ಟುಕೊಂಡು ನಕಲಿ‌ ದಾಖಲೆ ಸೃಷ್ಟಿಸುತ್ತಿದ್ದರು. ಯಶಸ್ವೀ ಕಾರ್ಯಾಚರಣೆ ನಡೆಸಿರುವ ಮಾಗಡಿ‌ ರಸ್ತೆ ಪೊಲೀಸರು ಬಂಧಿತರಿಂದ 77 ಲಕ್ಷ ಮೌಲ್ಯದ 53 ಬೈಕ್ ಗಳು ವಶಕ್ಕೆ ಪಡೆದಿದ್ದಾರೆ.

vtv vitla
vtv vitla
- Advertisement -

Related news

error: Content is protected !!