Tuesday, May 21, 2024
spot_imgspot_img
spot_imgspot_img

ಆಮ್ಲಾ ಜ್ಯೂಸ್ ಕುಡಿಯುವುದರಿಂದ ಎಷ್ಟೇಲ್ಲ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ! ಇಲ್ಲಿದೆ ಮಾಹಿತಿ

- Advertisement -G L Acharya panikkar
- Advertisement -

ವಿಟಮಿನ್ ಸಿ ಇಂದ ಸಮೃದ್ಧವಾದ ಬೆಟ್ಟದ ನೆಲ್ಲಿ ಹಲವು ಗುಣಕಾರಿ ಅಂಶಗಳನ್ನು ಹೊಂದಿದೆ. ಬೆಟ್ಟದ ನೆಲ್ಲಿಯು ಒಗರು ರುಚಿಯನ್ನು ಹೊಂದಿರುತ್ತದೆ. ಸುಲಭವಾಗಿ ತಯಾರಿಸಬಹುದಾದ ಬೆಟ್ಟದ ನೆಲ್ಲಿ ಜ್ಯೂಸ್ ಬೇಸಿಗೆಯಲ್ಲಿ ಬಹಳ ಹಿತಕಾರಿ. ಒಂದು ದೊಡ್ಡ ಗ್ಲಾಸ್ ನೀರಿಗೆ ಎರಡು ಚಮಚ ಬೆಟ್ಟದ ನೆಲ್ಲಿ ಸಿರಪ್ ಹಾಗೂ ಎರಡು ಚಮಚ ಬೆಲ್ಲ ( ಜೋನಿ ಬೆಲ್ಲ ಆದರೆ ಇನ್ನೂ ಒಳ್ಳೆಯದು ) ಚಿಟಿಕೆ ಉಪ್ಪು, ಕೆಲವು ಪುದೀನಾ ಎಲೆಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಅದ್ಭುತ ರುಚಿಕೊಡುವ ಬೆಟ್ಟದ ನೆಲ್ಲಿಯ ಜ್ಯೂಸ್ ಸವಿಯಬಹುದು.

*ನೆಲ್ಲಿಕಾಯಿ ಥೈರಾಯ್ಡ್ ಗ್ರಂಥಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಅಷ್ಟೇ ಅಲ್ಲ, ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ.

*ಅಸಿಡಿಟಿ, ಮೊಡವೆ, ಆಯಾಸ, ಮಲಬದ್ಧತೆ, ಹೊಟ್ಟೆ ಉಬ್ಬುವುದು ಅಥವಾ ಇತರ ಯಾವುದೇ ಗ್ಯಾಸ್ಟ್ರಿಕ್ ಸಮಸ್ಯೆಗೆ ಸಹಾಯ ಮಾಡುತ್ತದೆ.

*ನೆಲ್ಲಿಕಾಯಿ ಜ್ಯೂಸ್ ಅನ್ನು ಪ್ರತಿದಿನ ಸೇವಿಸುವುದರಿಂದ ನಿಮ್ಮ ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಕಣ್ಣಿನ ಪೊರೆ, ಕಿರಿಕಿರಿ ಮತ್ತು ತೇವಾಂಶದ ಕಣ್ಣುಗಳಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.

- Advertisement -

Related news

error: Content is protected !!