Saturday, July 5, 2025
spot_imgspot_img
spot_imgspot_img

ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನ ಮೊಬೈಲ್‌‌ಗೆ ಬೆಂಕಿ; ತಪ್ಪಿದ ಅನಾಹುತ

- Advertisement -
- Advertisement -

ನವದೆಹಲಿ: ಇಂಡಿಗೋದ ದಿಬ್ರುಗಢ-ದೆಹಲಿ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಫೋನ್‌ಗೆ ಬೆಂಕಿ ಹತ್ತಿಕೊಂಡಿದ್ದು, ಕ್ಯಾಬಿನ್ ಸಿಬ್ಬಂದಿ ಅಗ್ನಿಶಾಮಕ ಯಂತ್ರದ ಸಹಾಯದಿಂದ ಬೆಂಕಿ ನಂದಿಸಿರುವ ಘಟನೆ ನಡೆದಿದೆ.

ಮೊಬೈಲ್ ಫೋನ್‌ಗೆ ಬೆಂಕಿ ಹತ್ತಿಕೊಂಡಿದ್ದರಿಂದ ಯಾವುದೇ ಪ್ರಯಾಣಿಕರಿಗೆ ಅಥವಾ ಕ್ಯಾಬಿನ್ ಸಿಬ್ಬಂದಿಗೆ ಗಾಯವಾಗಿಲ್ಲ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ದಿಬ್ರುಗಢದಿಂದ ದೆಹಲಿಗೆ ತೆರಳುತ್ತಿದ್ದಾಗ ಕ್ಯಾಬಿನ್ ಸಿಬ್ಬಂದಿಯೊಬ್ಬರು ಪ್ರಯಾಣಿಕರ ಫೋನ್‌ನಿಂದ ಕಿಡಿಗಳು ಮತ್ತು ಹೊಗೆಯನ್ನು ಹೊರಸೂಸುವುದನ್ನು ಕಂಡಿದ್ದು, ನಂತರ ಕ್ಯಾಬಿನ್ ಸಿಬ್ಬಂದಿ ಅಗ್ನಿಶಾಮಕವನ್ನು ಬಳಸಿ ಬೆಂಕಿಯನ್ನು ನಂದಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!