Saturday, August 8, 2026
spot_imgspot_img
spot_imgspot_img

ಇಂದಿನಿಂದ ಸೀಟ್ ಬೆಲ್ಟ್ ಕಡ್ಡಾಯ – ಉಲ್ಲಂಘಿಸಿದರೆ ದಂಡ ಪಿಕ್ಸ್ .!

- Advertisement -
- Advertisement -

ಇಂದಿನಿಂದ ಕರ್ನಾಟಕದಲ್ಲಿ ವಾಹನದಲ್ಲಿ ಪ್ರಯಾಣಿಸುವ ಸಹ ಪ್ರಯಾಣಿಕರೂ ಸೀಟ್ ಬೆಲ್ಟ್ ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದ್ದು, ಒಂದು ವೇಳೆ ಸೀಟ್‍ಬೆಲ್ಟ್ ಧರಿಸದಿದ್ದರೆ ಇಂದಿನಿಂದಲೇ ಜಾರಿಗೆ ಬರುವಂತೆ 1 ಸಾವಿರ ರೂ. ದಂಡ ವಿಧಿಸಲು ಆದೇಶ ಹೊರಡಿಸಲಾಗಿದೆ.

ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸೂಚನೆ ಪ್ರಕಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಈ ಹೊಸ ಆದೇಶ ಹೊರಡಿಸಿದ್ದು, ಸೀಟ್‍ಬೆಲ್ಟ್ ಧರಿಸದಿದ್ದರೆ 1 ಸಾವಿರ ರೂ. ದಂಡ ಪಾವತಿಬೇಕು ಅಲ್ಲದೆ, ಈ ಹಿಂದೆ 500 ರೂ. ಇದ್ದ ದಂಡವನ್ನು ಪರಿಷ್ಕೃತ ಆದೇಶದಲ್ಲಿ ದುಟ್ಟಪ್ಪು ಮಾಡಲಾಗಿದೆ. ಇನ್ನು ಮೈಸೂರು ನಗರ, ಹುಬ್ಬಳ್ಳಿ, ಧಾರವಾಡ ನಗರ, ಮಂಗಳೂರು ನಗರ, ಬೆಳಗಾವಿ ಮತ್ತು ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಿಗೆ ಹಾಗೂ ರಾಜ್ಯದ ಎಲ್ಲ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಈ ಆದೇಶವನ್ನು ಹೊರಡಿಸಲಾಗಿದೆ.

- Advertisement -

Related news

error: Content is protected !!