Thursday, May 16, 2024
spot_imgspot_img
spot_imgspot_img

ಇಂದು 73ನೇ ಗಣರಾಜ್ಯೋತ್ಸವದ ಸಂಭ್ರಮ; ಬೆಳಗ್ಗೆ 10ರಿಂದ ಪಥಸಂಚಲನ

- Advertisement -G L Acharya panikkar
- Advertisement -

ಇಂದು ದೇಶದಲ್ಲಿ 73ನೇ ಗಣರಾಜ್ಯೋತ್ಸವದ ಸಂಭ್ರಮ. ದೆಹಲಿಯ ರಾಜಪಥ್​​​, ಗಣತಂತ್ರದ ಸಂಭ್ರಮಕ್ಕೆ ಸಾಕ್ಷಿ ಆಗ್ತಿದೆ. ಆದರೆ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ, ಈ ವರ್ಷದ ಗಣರಾಜ್ಯೋತ್ಸವ ಪರೇಡ್​ ವೀಕ್ಷಣೆಗೆ ಕೇವಲ 5 ಸಾವಿರದಿಂದ 8 ಸಾವಿರ ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಮೊದಲು 24 ಸಾವಿರ ಜನರಿಗೆ ಪರೇಡ್​ ವೀಕ್ಷಣೆಗೆ ಅವಕಾಶ ಕೊಡಲಾಗುವುದು ಎಂದು ಸರ್ಕಾರ ಹೇಳಿತ್ತು. ಆದರೆ ಒಮಿಕ್ರಾನ್​ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 2 ಡೋಸ್​ ಕೊರೊನಾ ಲಸಿಕೆ ತೆಗೆದುಕೊಂಡವರು ಮಾತ್ರ ಪರೇಡ್​ ವೀಕ್ಷಣೆ ಮಾಡಬಹುದಾಗಿದೆ.

10 ಗಂಟೆಯಿಂದ ಪಥಸಂಚಲನ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ‌ ಭಾರೀ ತೀವ್ರವಾದ ಚಳಿ‌ ಹಾಗೂ ಶೀತಗಾಳಿಯಿದೆ. ಹೀಗಾಗಿ ಈ ಬಾರಿ ಗಣರಾಜ್ಯೋತ್ಸವ ಆಚರಣೆಗಳು ತಡವಾಗಿ ಆರಂಭವಾಗಲಿವೆ ಅಂತ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.. ಇಷ್ಟು ವರ್ಷ ಬೆಳಗ್ಗೆ 10 ಗಂಟೆಗೆ ಪಥಸಂಚಲನ ಆರಂಭವಾಗುತಿತ್ತು. ಆದ್ರೆ ಈ ಬಾರಿ ರಾಜಪಥ್​ನಲ್ಲಿ ಪಥಸಂಚಲನ ಬೆಳಗ್ಗೆ 10.30ಕ್ಕೆ ಶುರುವಾಗಲಿದೆ. ರಾಜಪಥ್‌ದಿಂದ ರಾಷ್ಟ್ರೀಯ ಕ್ರೀಡಾಂಗಣದವರೆಗೆ ಸಾಗುವ ಪರೇಡ್ ಅಂತಿಮವಾಗಿ ಕೆಂಪು ಕೋಟೆಯನ್ನು ತಲುಪುತ್ತದೆ.

ವಿವಿಧ ದಶಕಗಳ ಸೇನಾ ಸಮವಸ್ತ್ರಗಳ ಪ್ರದರ್ಶನ
ಗಣರಾಜ್ಯೋತ್ಸವದ ಪರೇಡ್​​ನಲ್ಲಿ ಪ್ರತಿ ವರ್ಷದಂತೆ ಈ‌ ಬಾರಿ ಕೂಡ ಸಶಸ್ತ್ರ ಪಡೆಗಳ ಬಲಾಬಲ ಪ್ರತಿಬಿಂಬವಾಗಲಿದೆ. ಭೂಸೇನೆಯ 6, ನೌಕಾಪಡೆ ಮತ್ತು ವಾಯುಪಡೆಯ ಒಂದೊಂದು ತುಕಡಿಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿವೆ. ಇದಲ್ಲದೆ 4 ಕೇಂದ್ರ ಸಶಸ್ತ್ರ ಪಡೆಗಳು, 2 NCC ದಳಗಳು, 1 ದೆಹಲಿ ಪೊಲೀಸ್ ಮತ್ತು 1 NSS ದಳಗಳು ಪರೇಡ್​ನಲ್ಲಿ ಭಾಗವಹಿಸಲಿವೆ ಹಾಗೂ ವಿವಿಧ ದಶಕಗಳಲ್ಲಿ ಭಾರತೀಯ ಸೇನೆ ಧರಿಸಿರುವ ಸಮವಸ್ತ್ರಗಳು ಮತ್ತು ಆಯುಧಗಳ ಪ್ರದರ್ಶನ ಮಾಡಲಾಗುತ್ತದೆ.

5 ರಫೇಲ್ ಜೆಟ್ ವಿಮಾನಗಳು ಭಾಗಿ
ಈ‌ ಬಾರಿಯ ಪರೆಡ್​​ನಲ್ಲಿ 27 ಬ್ಯಾಂಡ್‌ಗಳು ಮೊಳಗಲಿವೆ. ಆ ಪೈಕಿ 22 ಭಾರತೀಯ ಸಶಸ್ತ್ರ ಪಡೆಗಳ ಬ್ಯಾಂಡ್‌ಗಳಾಗಿವೆ. ಹಾಗೂ ವಂದೇ ಭಾರತಂ ಸ್ಪರ್ಧೆಯಿಂದ ಆಯ್ಕೆಯಾದ ಕಲಾವಿದರು ಬ್ಯಾಂಡ್‌ಗಳಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ ಪರೇಡ್​​ನಲ್ಲಿ 2 ಬೈಕ್​ಗಳ ಪ್ರದರ್ಶನದ ಜೊತೆಗೆ BSFನ ಮಹಿಳಾ ಮುಖ್ಯ ತಂಡದಿಂದ ಪಥಸಂಚಲನ ಕೂಡ ಇರಲಿದೆ. ಅಮೃತ ಮಹೋತ್ಸವದ ಹಿನ್ನಲೆಯಲ್ಲಿ 75 ವಿಮಾನಗಳಿಂದ ವೈಮಾನಿಕ ಪ್ರದರ್ಶನ ಇರಲಿದೆ. ಈ 75 ಯುದ್ಧ ವಿಮಾನಗಳ ಪೈಕಿ ಹೊಸದಾಗಿ ಭಾರತ ಸೇನೆ ಸೇರಿದ 5 ರಪೇಲ್ ವಿಮಾನಗಳು ಕೂಡ ಇರಲಿವೆ.

ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನ
ಗಣರಾಜ್ಯೋತ್ಸವ ಕೇಂದ್ರ ಬಿಂದು ರಾಜಪಥ್​​​ನಲ್ಲಿ ಕರ್ನಾಟಕದ ಕರಕುಶಲ ವಸ್ತುಗಳ ಸ್ತಬ್ಧಚಿತ್ರ ಗಮನ ಸೆಳೆಯಲಿದೆ. ಪಥ ಸಂಚಲನದಲ್ಲಿ ಕರ್ನಾಟಕವು ಸತತವಾಗಿ 13 ವರ್ಷದಿಂದ ತನ್ನ ಸ್ತಬ್ಧಚಿತ್ತವನ್ನು ಪ್ರಸ್ತುತ ಪಡಿಸುತ್ತಿದೆ. ಈ ಬಾರಿ ಇಡೀ ದಕ್ಷಿಣ ಭಾರತದಿಂದ ಕರ್ನಾಟಕದ ಸ್ತಬ್ದಚಿತ್ರ ಮಾತ್ರ ಪ್ರದರ್ಶನವಾಗುತ್ತಿದೆ. ಒಟ್ಟು 21 ಸ್ತಬ್ದಚಿತ್ರಗಳ ಪ್ರದರ್ಶನ ಆಗುತ್ತಿದೆ. ಆ ಪೈಕಿ 12 ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರದ 9 ಇಲಾಖೆಗಳು ಸ್ತಬ್ದಚಿತ್ರಗಳನ್ನು‌ ರಚಿಸಿವೆ.

ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ವಿಜಯ್ ಚೌಕ್​ನಲ್ಲಿ ಡ್ರೋನ್​ಗಳಿಂದ ಮೂಡಿ ಬಂದ ಆಕರ್ಷಕ ಚಿತ್ತಾರಗಳು ಮನಸೆಳೆಯುವಂತಿವೆ. ಗಣರಾಜ್ಯೋತ್ಸವದ ಮುನ್ನಾ ದಿನದಂದು ವಿಜಯ್ ಚೌಕ್‌ನಲ್ಲಿ ಬೀಟಿಂಗ್ ರಿಟ್ರೀಟ್ ಸಮಾರಂಭದ ಭಾಗವಾಗಿ 1000 ಮೇಡ್ ಇನ್ ಇಂಡಿಯಾ ಡ್ರೋನ್‌ ಗಳಿಂದ ಮೂಡಿಬಂದ ವಿಭಿನ್ನ ರಚನೆಗಳು ನೋಡುಗರ ಮನಸೂರೆಗೊಳ್ಳುವಂತಿವೆ.

suvarna gold
- Advertisement -

Related news

error: Content is protected !!