- Advertisement -
- Advertisement -




ಇಂದೋರ್: 16 ವರ್ಷದ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಶಾಲೆಯೊಂದರಲ್ಲಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಇಂದೋರ್‍ನಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ವೃಂದಾ ತ್ರಿಪಾಠಿ ಎಂದು ಗುರುತಿಸಲಾಗಿದೆ.

ಈಕೆ 11ನೇ ತರಗತಿಯನ್ನು ಓದುತ್ತಿದ್ದಳು. ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದಕ್ಕೆ ಪೂರ್ವ ತಯಾರಿ ಮಾಡುತ್ತಿರುವಾಗ ವೃಂದಾ ಕುಸಿದುಬಿದ್ದಿದ್ದಾಳೆ. ವೃಂದಾಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವೃಂದಾ ಮೃತಪಟ್ಟಿದ್ದಾಳೆ.
ವೃಂದಾಳಿಗೆ ಹೃದಯಾಘಾತವಾಗುವ ಮೊದಲು ಸಂಪೂರ್ಣವಾಗಿ ಆರೋಗ್ಯವಾಗಿದ್ದಳು. ಆದರೆ ಆಕೆ ಶೀತದಿಂದ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
- Advertisement -