Sunday, May 12, 2024
spot_imgspot_img
spot_imgspot_img

ಉಗ್ರ ಸಂಘಟನೆ ಜೊತೆ ನಂಟು ಆರೋಪ; ಮಾಝ್‌ ಮುನೀರ್ ಅಹಮ್ಮದ್‌ನನ್ನು ಮಂಗಳೂರಿಗೆ ಕರೆ ತಂದು ವಿವಿಧ ಕಡೆ ಮಹಜರು ನಡೆಸಿದ ಪೋಲಿಸರು

- Advertisement -G L Acharya panikkar
- Advertisement -

ಬಂಟ್ವಾಳ್‌: ಐಸಿಸ್ ಸಂಘಟನೆ ಜತೆ ನಂಟು ಹೊಂದಿರುವ ಆರೋಪದಲ್ಲಿ ಶಿವಮೊಗ, ಪೊಲೀಸರು ಬಂಧಿಸಿರುವ ಮಾಝ್‌ ಮುನೀರ್ ಅಹಮ್ಮದ್ ನನ್ನು ಬುಧವಾರ ಮಂಗಳೂರಿಗೆ ಕರೆತಂದು ಬಂಟ್ವಾಳ ತಾಲೂಕಿನ ನಾವೂರ ಸಮೀಪದ ಸುಲ್ತಾನ್ ಕಟ್ಟೆ ಅಗ್ರಹಾರ ಬಳಿ ಮಹಜರು ನಡೆಸಿದ್ದಾರೆ.

ಪ್ರಕರಣದ ಇನ್ನೋರ್ವ ಆರೋಪಿ ತೀರ್ಥಹಳ್ಳಿಯ ಮಹಮ್ಮದ್ ಶಾರೀಕ್ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ. ಮಹಮ್ಮದ್ ಶಾರೀಕ್ ಮತ್ತು ಮಾಝ್ ಮುನೀರ್‌ ಅಹಮ್ಮದ್‌ ಮಂಗಳೂರಿನ ಬಿಜೈ, ಕೋರ್ಟ್ ರಸ್ತೆ, ಪಂಪ್‌ವೆಲ್‌ನಲ್ಲಿ ಕಳೆದ ಡಿಸೆಂಬರ್‌ನಲ್ಲಿ ಪತ್ತೆಯಾದ ಉಗ್ರ ಪರ ಗೋಡೆ ಬರಹದ ಆರೋಪಿಗಳಾಗಿದ್ದಾರೆ.

ಮಹಜರು ವೇಳೆ ಡಾಗ್ ಸ್ಕ್ವಾಡ್ ಮತ್ತು ಬಾಂಬ್ ಸ್ಜ್ವಾಡ್ ಮೂಲಕ ಪರಿಶೀಲನೆ ನಡೆಸಿದೆ.ಈ ಜಾಗಗಳಲ್ಲಿ ಬಾಂಬ್ ಬ್ಲಾಸ್ಟಿಂಗ್ ರಿಹರ್ಸಲ್ ಮಾಡುತ್ತಿದ್ದ ಎಂಬ ಆರೋಪ ಮಾಡಲಾಗಿದೆ.

ತೀರ್ಥಹಳ್ಳಿ ದಿವ್ಯ ಎಸ್ಪಿ ಶಾಂತವೀರಯ್ಯ ಹಾಗೂ ಆಗುಂಬೆ ಪಿಎಸ್‌ಐ ಶಿವಕುಮಾರ್ ನೇತೃತ್ವದ ತಂಡ ಶಂಕಿತ ಉಗ್ರ ಮಾಝ್‌ನನ್ನು ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿದ್ದು, ಸರಪಾಡಿ ಗ್ರಾಮದ ಅಗ್ರಹಾರ, ಸಿದ್ಧಕಟ್ಟೆ, ನಾವೂರು, ಹಾಗೂ ಮತ್ತ ಎಂಬಲ್ಲಿ ಮಹಜರು ನಡೆಸಲಾಗಿದೆ.

ಸರಪಾಡಿ ಗ್ರಾಮದ ದ್ವೀಪದಂತಿದ್ದು,ಈ ಜಾಗಕ್ಕೆ ಕಡಿಮೆ‌‌ ಜನ ಹೋಗುತ್ತಿದ್ದರು ಎನ್ನಲಾಗಿದೆ.ಅಂತಹ ಜನವಸತಿ ಇಲ್ಲದ ಸ್ಥಳದಲ್ಲಿ ಬಾಂಬ್ ರಿಹರ್ಸಲ್ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.

vtv vitla
- Advertisement -

Related news

error: Content is protected !!