Sunday, September 27, 2026
spot_imgspot_img
spot_imgspot_img

ಉಡುಪಿ: ಆರ್ಥಿಕ ಸಂಕಷ್ಟದಿಂದ ಮನನೊಂದು ಆಟೋ ಚಾಲಕ ಆತ್ಮಹತ್ಯೆ..!

- Advertisement -
- Advertisement -

ಉಡುಪಿ: ನಗರದ ಶಂಕರಪುರದಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ರಿಕ್ಷಾ ಚಾಲಕ ಮುದರಂಗಡಿದ ರಾಜೇಶ್ ದೇವಾಡಿಗ ಎನ್ನಲಾಗಿದೆ.

ಮನೆ ನಿರ್ಮಾಣ ಹಾಗೂ ಇತರೆ ಉದ್ದೇಶಗಳಿಗಾಗಿ ರಾಜೇಶ್‌ ಹಲವಾರು ಸಾಲಗಳನ್ನು ಮಾಡಿದ್ದು, ಅದನ್ನು ತೀರಿಸಲಾಗದೇ ಬೇಸರದಲ್ಲಿದ್ದ ಎನ್ನಲಾಗಿದೆ. ಈ ಸಮಸ್ಯೆಗಳಿಂದ ಮನನೊಂದು ರಾಜೇಶ್ ತನ್ನ ಸಹೋದರನಿಗೆ ಸೇರಿದ ಕೇಟರಿಂಗ್ ಶೆಡ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!