Sunday, May 5, 2024
spot_imgspot_img
spot_imgspot_img

ಉಡುಪಿ: ಇಸ್ಪೀಟು, ಮಟ್ಕಾ ಅಡ್ಡೆಗೆ ದಾಳಿ; 8 ಮಂದಿ ಪೊಲೀಸ್ ವಶ.!

- Advertisement -G L Acharya panikkar
- Advertisement -
astr

ಉಡುಪಿ: ಕಾಪು ಹಾಗೂ ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಟ್ಕಾ ಹಾಗೂ ಇಸ್ಪೀಟು ಜುಗಾರಿ ಅಡ್ಡೆಗೆ ಪೊಲೀಸರು ದಾಳಿ ನಡೆಸಿ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.

ಮಟ್ಕಾ ಜುಗಾರಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕಾಪು ಪೊಲಿಸರು, ಏಣಗುಡ್ಡೆ ಗ್ರಾಮದ ಬೇಕರಿಯೊಂದರ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಚೀಟಿ ಬರೆಯುತ್ತಿದ್ದ ಮೊಹಮ್ಮದ್ ಆಸಿಫ್ ಎಂಬಾತನನ್ನು ಹಾಗೂ ಮೂಡಬೆಟ್ಟು ಗ್ರಾಮದ ನವರಂಗ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಜನಾರ್ಧನ ಎಂಬವನನ್ನು ವಶಕ್ಕೆ ಪಡೆದು ಇಬ್ಬರಿಂದ ಕ್ರಮವಾಗಿ 850 ರೂ. ಹಾಗೂ 770 ರೂ. ನಗರದನ್ನು ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತೊಂದೆಡೆ, ಕುಂದಾಪುರ ಬನ್ನೂರು ಗ್ರಾಮದ ಚಾರ್ ವೊಂದರ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟು ಜುಗಾರಿ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಇಸ್ಪೀಟು ಜುಗಾರಿ ನಿರತರಾಗಿದ್ದ ನವೀನ, ಸಚಿನ್, ಶ್ರೀನಾಥ, ವಸಂತ್, ಶ್ರೀಧರ, ಸುರೇಶ ಎಂಬವರನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ 5,150 ರೂ. ನಗದು ಹಾಗೂ ಆಟಕ್ಕೆ ಬಳಸಿದ ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!