Sunday, June 29, 2025
spot_imgspot_img
spot_imgspot_img

ಉಡುಪಿ: ಎರಡು ಪ್ರತ್ಯೇಕ ಪ್ರಕರಣ; ಇಬ್ಬರು ನಾಪತ್ತೆ

- Advertisement -
- Advertisement -

ಉಡುಪಿ: ಎರಡು ಪ್ರತ್ಯೆಕ ಪಕ್ರರಣಗಳಲ್ಲಿ ಓರ್ವ ಯುವತಿ ಮತ್ತು ಓರ್ವ ಪುರುಷ ನಾಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿಯ ತೆಂಕನಿಡಿಯೂರು ಗ್ರಾಮದ ತೊಟ್ಟಂ ನಿವಾಸಿ ರೂಪಾ (26) ಎಂಬವರು ನವೆಂಬರ್ 13ರಂದು ಬೆಳಗ್ಗೆ 6:30ರ ಸುಮಾರಿಗೆ ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋದವರು ವಾಪಾಸ್ಸು ಬಾರದೇ ನಾಪತ್ತೆಯಾಗಿದ್ದಾರೆ. ಇವರು 5 ಅಡಿ 1 ಇಂಚು ಎತ್ತರ, ಗೋಧಿ ಮೈ ಬಣ್ಣ, ಸಾಧಾರಣ ಮೈ ಕಟ್ಟು ಹೊಂದಿದ್ದು, ಕನ್ನಡ, ಹಿಂದಿ, ನೇಪಾಳಿ ಹಾಗೂ ತುಳು ಭಾಷೆ ಮಾತನಾಡುತ್ತಾರೆ.

ಮತ್ತೊಂದು ಪ್ರಕರಣದಲ್ಲಿ ಮಗುವಿನ ಚಿಕಿತ್ಸೆಗಾಗಿ ಕೊಡವೂರು ಮಧ್ವನಗರದ ಮೂಡುಬೆಟ್ಟುವಿಗೆ ಬಂದಿದ್ದ ಮಂಗಳೂರಿನ ಮೇಲ್ ಪದವಿನ ನಿವಾಸಿ ವಿಜಯ ಶೆಟ್ಟಿ (47) ಎಂವರು ನವೆಂಬರ್ 6ರಿಂದ ನಾಪತ್ತೆಯಾಗಿದ್ದಾರೆ. ಇವರು 5 ಅಡಿ 7 ಇಂಚು ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ಇಂಗ್ಲಿಷ್ ಹಾಗೂ ತುಳು ಭಾಷೆ ಮಾತನಾಡುತ್ತಾರೆ.

- Advertisement -

Related news

error: Content is protected !!