Tuesday, July 1, 2025
spot_imgspot_img
spot_imgspot_img

ಉಡುಪಿ ಜಿಲ್ಲೆಯ ಪ್ರೌಢಶಾಲೆಗಳ ಸುತ್ತ ಮುತ್ತ ಸೆಕ್ಷನ್ 144 ಜಾರಿ- ಜಿಲ್ಲಾಧಿಕಾರಿ

- Advertisement -
- Advertisement -

ಉಡುಪಿ: ದೇಶದಾದ್ಯಂತ ಸದ್ದು ಮಾಡುತ್ತಿರುವ ಹಿಜಾಬ್ ವಿವಾದದಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಇದೀಗ ಸೋಮವಾರದಿಂದ ಶಿಕ್ಷಣ ಸಂಸ್ಥೆಗಳು ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳ 200 ಮೀಟರ್ ಸುತ್ತ ಮುತ್ತ ಸೆಕ್ಷನ್ 144 ಜಾರಿಗೊಳಿಸಿ ಜಿಲ್ಲಾಧಿಕಾರಿ ಕೂರ್ಮರಾವ್ ಆದೇಶ ಹೊರಡಿಸಿದ್ದಾರೆ.

ಫೆ. 14 ರಿಂದ ಫೆಬ್ರವರಿ 19 ವರೆಗೆ ನಿಷೇಧಾಜ್ಞೆ ಜಾರಿಯಲ್ಲಿದ್ದು, ಈ ವೇಳೆ ಶಾಲೆಯ ಸುತ್ತಮುತ್ತ ಗುಂಪು ಸೇರುವಂತಿಲ್ಲ. ಪ್ರತಿಭಟನೆ, ಮೆರವಣಿಗೆ ಪರ ವಿರುದ್ಧ ಘೋಷಣೆ ಕೂಗುವಂತಿಲ್ಲ. ಯಾವುದೇ ವ್ಯಕ್ತಿ ಜಾತಿ ಧರ್ಮಕ್ಕೆ ನೈತಿಕತೆ ವಿರುದ್ಧ ನಡೆದುಕೊಳ್ಳುವಂತಿಲ್ಲ. ಶಸ್ತ್ರ, ದೊಣ್ಣೆ, ಕತ್ತಿ‌ ಮತ್ತಿತರ ಮಾರಾಕಾಯುಧಗಳ ಸಾಗಾಟಕ್ಕೆ ನಿಷೇಧ, ಪ್ರಚೋದನಕಾರಿ ಭಾಷಣ, ಸಂಗೀತ, ಹಾಡು, ಘೋಷಣೆಗಳನ್ನು ಕೂಗುವಂತೆ‌ ಇಲ್ಲ ಎಂದು ಆದೇಶಿಸಿದ್ದಾರೆ.

ಇನ್ನು ಫೆಬ್ರವರಿ 14 ಬೆಳಿಗ್ಗೆ 6 ಗಂಟೆಯಿಂದ ಫೆ. 19 ಸಂಜೆ 6 ಗಂಟೆಯ ತನಕ ಸೆಕ್ಷನ್ ಜಾರಿಯಲ್ಲಿದ್ದು, ಉಡುಪಿ ಜಿಲ್ಲೆ ಎಸ್ ಪಿ ಮನವಿ ಮೇರೆಗೆ ಉಡುಪಿ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!