Sunday, September 13, 2026
spot_imgspot_img
spot_imgspot_img

ಉಡುಪಿ: ಜೀವನ್ಮರಣ ಪರಿಸ್ಥಿಯಲ್ಲಿದ್ದ ಮಹಿಳೆಯನ್ನು ರಕ್ಷಿಸಿ ಮಾನವೀಯತೆ ಮೆರೆದ ಶ್ರಮಿಕ ತರುಣರ ತಂಡ ಬೈರಂಪಳ್ಳಿ

- Advertisement -
- Advertisement -
astr

ಉಡುಪಿ: ಬೈರಂಪಳ್ಳಿ ವ್ಯಾಪ್ತಿಯ ವೃದ್ದೆ ಅಪ್ಪಿ ಕುಲಾಲ್ ಎಂಬುವವರು ಆರೋಗ್ಯ ಸಮಸ್ಯೆಯಿಂದ ತೋಟದಲ್ಲಿ ಜೀವನ್ಮರಣ ಪರಿಸ್ಥಿಯಲ್ಲಿ ಬಿದ್ದಿರುದನ್ನು ಕಂಡ ಶ್ರಮಿಕ ತರುಣರ ತಂಡ ಬೈರಂಪಳ್ಳಿ ಇದರ ಮಹಿಳಾ ಘಟಕದ ಗೌರವಾಧ್ಯಕ್ಷೆ ವಿಜಯಶ್ರೀ ಭಟ್ ರವರ ನೇತೃತ್ವದಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ ಉಡುಪಿ ಜಿಲ್ಲಾ ಆರೋಗ್ಯ ಸಿಬ್ಬಂದಿಗಳ ನೆರವಿನೊಂದಿಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ಸದ್ಯ ಜೀವನ್ಮರಣ ಪರಿಸ್ಥಿಯಲ್ಲಿದ್ದ ಅಪ್ಪಿ ಕುಲಾಲ್ ಈಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸೇವೆಯಲ್ಲಿ ತಂಡದ ಸಂಸ್ಥಾಪಕರು ಸಂತೋಷ್ ಕುಮಾರ್ ಬೈರಂಪಳ್ಳಿ, ಸದಸ್ಯರಾದ ಸೂರಜ್ ಆಚಾರ್ಯ, ಮಹಿಳಾ ಘಟಕದ ಪ್ರದಾನ ಕಾರ್ಯದರ್ಶಿ ದೀಪಾ ಕುಮಾರಿ ಮತ್ತು ಸದಸ್ಯೆ ಶಿಲ್ಪಾ ಕೈಜೋಡಿಸಿದರು.

- Advertisement -

Related news

error: Content is protected !!