Friday, May 17, 2024
spot_imgspot_img
spot_imgspot_img

ಉಡುಪಿ: ಡ್ರಗ್‌ ಜಾಲ ಕಂಡು ಬೆಚ್ಚಿಬಿದ್ದ ಪೊಲೀಸರು..! 42 ವಿದ್ಯಾರ್ಥಿಗಳು ಸಸ್ಪೆಂಡ್ – ಹಾಸ್ಟೆಲ್‌ ರೂಮ್‌ನಲ್ಲಿ ರಾಶಿಗಟ್ಟಲೆ ಕಾಂಡೋಮ್ ಪತ್ತೆ..! ಎತ್ತ ಸಾಗುತ್ತಿದೆ ವಿದ್ಯಾರ್ಥಿಗಳ ಜೀವನ.?

- Advertisement -G L Acharya panikkar
- Advertisement -

ಉಡುಪಿ: ಡ್ರಗ್ ಮಾಫಿಯಾ ವಿರುದ್ದ ಜಿಲ್ಲಾ ಪೊಲೀಸ್ ಇಲಾಖೆ ಸಮರ ಸಾರಿದೆ. ಹೊರ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳು ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗುತ್ತಿರುವುದು ಗಮನಕ್ಕೆ ಬಂದ ಹಿನ್ನಲೆ ಮಣಿಪಾಲದ ವಿದ್ಯಾಸಂಸ್ಥೆಗಳ ಮೇಲೆ ಪೊಲೀಸ್ ಇಲಾಖೆ ದಾಳಿ ನಡೆಸಿದೆ. ಈ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು 42 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ.

ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾದ 42 ವಿದ್ಯಾರ್ಥಿಗಳಿಗೆ ಒಂದು ತಿಂಗಳ ಕಾಲ ಅಮಾನತು ಶಿಕ್ಷೆ ನೀಡಿದೆ. ಮೆಡಿಕಲ್, ಮ್ಯಾನೇಜ್ಮೆಂಟ್, ಹೋಟೆಲ್ ಮ್ಯಾನೆಜ್ಮೆಂಟ್, ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದ ಡೆಲಿವರಿ ಬಾಯ್ ಕೆಲಸವನ್ನು ಉಪಯೋಗಿಸಿ ತಮ್ಮ ಹಾಸ್ಟೆಲ್‌ಗಳಗೆ ಡ್ರಗ್ಸ್ ಸಪ್ಲೇ ಮಾಡುತ್ತಿದ್ದರು.

ಡ್ರಗ್‌ ಸಪ್ಲೈ ಮಾಡೋಕೆ ಪ್ಲ್ಯಾನ್ ಏನು ಗೊತ್ತಾ?
ಜುಮೋಟೋದಲ್ಲಿ ಊಟ ಆರ್ಡರ್ ಮಾಡಿದ್ರೆ ಊಟದ ಜೊತೆ ಡ್ರಗ್ಸ್ ಕೂಡ ಸಪ್ಲೈ ಆಗುತ್ತಿದೆ. ಈ ಬಗ್ಗೆ ಮಾಹಿತಿ ಬಯಲಾಗಿದ್ದು ಪೊಲೀಸರು ಓರ್ವ ಡಿಲಿವರಿ ಬಾಯ್ನನ್ನು ಬಂಧಿಸಿದ್ದಾರೆ. ರಾತ್ರಿ ವೇಳೆ 11.30 ರ ನಂತರ ಬರುವ ಊಟದ ಪಾಕೇಟ್‌ಲ್ಲಿ ಡ್ರಗ್ಸ್ ತರಿಸಲಾಗುತ್ತಿತ್ತು . ಸ್ಮಾರ್ಟ್ ವಾಚ್ ಪೌಚ್ ಬಾಕ್ಸ್ ಒಳಗೆ LSD ಪೇಪರ್, ಡ್ರಗ್ಸ್ ಸಾಗಾಟ ಮಾಡಲಾಗುತ್ತಿತ್ತು . ವಾಚ್ ಡಿಸ್ಕ್ರಿಪ್ಷನ್ ಕಟ್ ಮಾಡಿ LSD ನ್ನು ಫಿಕ್ಸ್ ಮಾಡಿ ಕಳುಹಿಸುತ್ತಿದ್ದರು ಎಂದು ಪೊಲೀಸ್ ಉನ್ನತ ಮೂಲಗಳು ಸ್ಪಷ್ಟ ಪಡಿಸಿವೆ.

ಹಾಸ್ಟೆಲ್ ರೂಂಗಳಲ್ಲಿ ಕಾಂಡೋಮ್ ರಾಶಿ..!!
ಹಾಸ್ಟೆಲ್‌ಳಿಗೆ ರೈಡ್ ಮಾಡಲು ಹೋದ ಉಡುಪಿ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಮಣಿಪಾಲ್ ಹಾಸ್ಟೆಲ್‌ನ ರೂಂಗಳಲ್ಲಿ ಮತ್ತಿನ ನಶೆಯಲ್ಲಿ ವಿದ್ಯಾರ್ಥಿನಿಯರ ಜೊತೆ ಕಾಮದಾಟ ನಡೆಯುತ್ತಿದ್ದದ್ದು ಯುವಕ- ಯುವತಿಯರು ಒಟ್ಟಿಗೆ ಗಾಂಜಾ ಸೇದುತ್ತಿದ್ದರು ಎಂದು ಬಯಲಾಗಿದೆ. ಯುವಕರು ತಮ್ಮ ಗರ್ಲ್ ಫ್ರೆಂಡ್ಸ್‌ಳಿಗೆ ಡ್ರಗ್ಸ್ ತಂದುಕೊಟ್ಟು ಬಳಿಕ ಸೆಕ್ಸ್‌‌ಗೆ ತಳ್ಳಿ ಅದನ್ನೆ ರೂಢಿಯಾಗಿಸಿಕೊಂಡಿದ್ದರು ಎಂಬ ಭಯಾನಕ ಸತ್ಯ ಬಯಲಾಗಿದೆ.

ಸದ್ಯ ಈ ಡ್ರಗ್ ಮಾಫಿಯಾದ ಬಗ್ಗೆ ಮಾತನಾಡಿರುವ ಎಸ್ಪಿ ಅಕ್ಷಯ್, ಮಣಿಪಾಲದಲ್ಲಿ ಡ್ರಗ್ ಜಾಲ ಸಾಕಷ್ಟು ವ್ಯಾಪಿಸಿದೆ. ಡ್ರಗ್ ಮುಕ್ತ ಮಣಿಪಾಲ ಮಾಡಲು ಮಾಹೆ ಯೂನಿವರ್ಸಿಟಿ ಕೂಡ ಸಹಕಾರ ನೀಡಿದ್ದು ಈ ನಿಟ್ಟಿನಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದಿದ್ದಾರೆ ಪೊಲೀಸ್ ಇಲಾಖೆ ತಿಳಿಸಿದೆ.

- Advertisement -

Related news

error: Content is protected !!