Tuesday, April 16, 2024
spot_imgspot_img
spot_imgspot_img

ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಕಂಬಳದ ವೇಳಾಪಟ್ಟಿ ಪ್ರಕಟ

- Advertisement -G L Acharya panikkar
- Advertisement -

ಮಂಗಳೂರು : ಕರಾವಳಿಯ ಜನಪದ ಕ್ರೀಡೆ ಎಂದೇ ಪ್ರಸಿದ್ದಿ ಪಡೆದ ಕಂಬಳವು ಯಾವಾಗ ಪ್ರಾರಂಭವಾಗುತ್ತದೆ ಎಂದು ಕಂಬಳ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಅಂತಹ ಕಂಬಳ ಪ್ರಿಯರಿಗೆ ಸಿಹಿ ಸುದ್ದಿಯೊಂದಿದೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಈ ಋತುವಿನ ಕಂಬಳದ ಸಂಭಾವ್ಯ ವೇಳಾಪಟ್ಟಿಯನ್ನು ಪ್ರಕಟವಾಗಿದೆ.

ಮಂಗಳೂರು ಜಿಲ್ಲಾ ಕಂಬಳ ಸಮಿತಿಯ ಸಭೆಯು ರವಿವಾರ ಮೂಡುಬಿದಿರೆಯಲ್ಲಿ ಸಮಿತಿಯ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಕಂಬಳದ ಸಂಭಾವ್ಯ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. 5ರಂದು ಶಿರ್ವ ಕಂಬಳದೊಂದಿಗೆ ಕಂಬಳ ಋತು ಪ್ರಾರಂಭಗೊಳ್ಳಲಿದ್ದು, ಎಪ್ರಿಲ್ 8ರ ವರೆಗೆ ಒಟ್ಟು 24 ಕಂಬಳಗಳು ನಡೆಯಲಿವೆ. ಈ ಬಾರಿ ಪಣಪಿಲದಲ್ಲಿ ಹೊಸದಾಗಿ ಕಂಬಳ ಆಯೋಜನೆಗೊಳ್ಳುತ್ತಿದೆ.

ಮಂಗಳೂರು ಪಿಲಿಕುಳದ ಕಂಬಳಕ್ಕೂ ನ. 12ರಂದು ದಿನಾಂಕ ನೀಡಲಾಗಿದ್ದು ಜಿಲ್ಲಾಡಳಿತ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿದೆ. ಪಿಲಿಕುಳದಲ್ಲಿ ಕೆಲವು ವರ್ಷಗಳಿಂದ ಕಂಬಳ ಸ್ಥಗಿತಗೊಂಡಿದ್ದು ಈ ಬಾರಿ ಆಯೋಜಿಸಲು ಜಿಲ್ಲಾಡಳಿತ ಉತ್ಸುಕತೆ ತೋರ್ಪಡಿಸಿದೆ ಎನ್ನಲಾಗಿದೆ.

ಕೊರೊನಾ ಸಮಸ್ಯೆಯಿಂದಾಗಿ ಕಳೆದ ಬಾರಿಯ ಕಂಬಳ ಋತು ಡಿ. 5 ರಿಂದ ಆರಂಭಗೊಂಡಿತ್ತು ಮತ್ತು ಒಟ್ಟು 18 ಕಂಬಳಗಳ ದಿನಾಂಕಗಳನ್ನು ಕಂಬಳ ಸಮಿತಿ ಪ್ರಕಟಿಸಿತ್ತು. 5 ಕಂಬಳ ಪೂರ್ಣಗೊಳ್ಳುವಷ್ಟರಲ್ಲಿ ವಾರಾಂತ್ಯ ಕರ್ಪ್ಯೂ, ಕೊರೊನಾ ನಿರ್ಬಂಧ ಜಾರಿಗೊಂಡ ಹಿನ್ನೆಲೆಯಲ್ಲಿ ಉಳಿದ 11 ಕಂಬಳಗಳನ್ನು ತಾತ್ಕಾಲಿಕವಾಗಿ ಸ್ವಗಿತಗೊಳಿಸಲಾಗಿತ್ತು. ಬಳಿಕ ಫೆಬ್ರವರಿಯಲ್ಲಿ ವಾರಾಂತ ಕರ್ಫ ತೆರವುಗೊಂಡ ಬಳಿಕ ಮರು ಆರಂಭಗೊಂಡು ಎಪ್ರಿಲ್‌ನಲ್ಲಿ ಕೊನೆಗೊಂಡಿತ್ತು. ಈ ಬಾರಿ ಹಿಂದಿನಂತೆ ನಿಗದಿತ ಸಮಯಕ್ಕೆ ಆರಂಭಗೊಳ್ಳುತ್ತಿದೆ.

- Advertisement -

Related news

error: Content is protected !!